ನಗದು ಹಣವಾಗಿರಲಿ ಅಥವಾ ಪ್ರಾಪರ್ಟಿಯಾಗಿರಲಿ, ಕಳ್ಳತನ, ದರೋಡೆ, ಪ್ರಾಕೃತಿಕ ವಿಕೋಪ ಮುಂತಾದುವುಗಳಿಂದ ಅವುಗಳನ್ನು ಸುರಕ್ಷಿತವಾಗಿಡುವುದು ಅತೀ ಮುಖ್ಯವಾಗಿದೆ. ಇವುಗಳಿಗಾಗಿಯೇ ವಿಶೇಷವಾದ ವಿಮಾ ಸೌಲಭ್ಯಗಳು ಲಭ್ಯವಿವೆ. ಕಾರು, ಮನೆ ಮುಂತಾದವುಗಳಿಗೆ ವಿಮೆಯಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಚಿನ್ನಕ್ಕೂ ಕೂಡಾ ವಿಮೆಯಿದೆ ಎಂದು ನಿಮಗೆ ತಿಳಿದಿದೆಯೇ?
ನಗದು ಹಣವಾಗಿರಲಿ ಅಥವಾ ಪ್ರಾಪರ್ಟಿಯಾಗಿರಲಿ, ಕಳ್ಳತನ, ದರೋಡೆ, ಪ್ರಾಕೃತಿಕ ವಿಕೋಪ ಮುಂತಾದುವುಗಳಿಂದ ಅವುಗಳನ್ನು ಸುರಕ್ಷಿತವಾಗಿಡುವುದು ಅತೀ ಮುಖ್ಯವಾಗಿದೆ. ಇವುಗಳಿಗಾಗಿಯೇ ವಿಶೇಷವಾದ ವಿಮಾ ಸೌಲಭ್ಯಗಳು ಲಭ್ಯವಿವೆ. ಕಾರು, ಮನೆ ಮುಂತಾದವುಗಳಿಗೆ ವಿಮೆಯಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಚಿನ್ನಕ್ಕೂ ಕೂಡಾ ವಿಮೆಯಿದೆ ಎಂದು ನಿಮಗೆ ತಿಳಿದಿದೆಯೇ?
ಬೇರೆ ಬೇರೆ ರೀತಿಯ ಅಪಾಯಗಳಿಂದ (ರಿಸ್ಕ್) ಚಿನ್ನವನ್ನು ರಕ್ಷಿಸುವುದಕ್ಕೆ ವಿಶೇಷವಾದ ವಿಮೆಗಳಿವೆ. ಬ್ಯಾಂಕ್ ಲಾಕರ್'ನಲ್ಲಿಟ್ಟ ಚಿನ್ನವು ಸುರಕ್ಷಿತವಾಗಿದೆ ಎಂದು ನೀವು ಭಾವಿಸುವುದಾದರೆ, ಒಂದು ವಿಷಯವನ್ನು ತಿಳಿದುಕೊಳ್ಳಿ. ಲಾಕರ್'ನಲ್ಲಿ ನೀವೇನಿಟ್ಟಿದ್ದೀರಿ ಎಂದು ನೀವು ಬ್ಯಾಂಕ್'ಗೆ ಬಹಿರಂಗಪಡಿಸಿಸಿರುವುದಿಲ್ಲ. ಅದುದರಿಂದ ಲಾಕರ್'ನಲ್ಲಿರುವ ನಿಮ್ಮ ಚಿನ್ನಕ್ಕೆ, ಬ್ಯಾಂಕ್ ಶೇ.100 ಜವಾಬ್ದಾರಿ ಹೊಂದಿರುವುದಿಲ್ಲ.
ಚಿನ್ನಾಭರಣಗಳನ್ನು ರಕ್ಷಿಸುವ ಅಗತ್ಯವೇನಿದೆ?
ವಿವಾಹದ ಸಂದರ್ಭದಲ್ಲಿ ಉಡುಗೊರೆಯಾಗಿ ಸಿಕ್ಕಿದ ಚಿನ್ನಾಭರಣವಾಗಿರಲಿ ಅಥವಾ ಶುಭಸಂದರ್ಭಗಳಲ್ಲಿ ಖರೀದಿಸಿದ ಚಿನ್ನವಾಗಿರಲಿ, ಆರ್ಥಿಕ ಸಂಕಷ್ಟದ ಸಮಯದಲ್ಲಿ ಈ ಹಳದಿ ಲೋಹವು ಅಪತ್ಬಾಂಧವ ವಸ್ತುವಾಗಿದೆ. ಚಿನ್ನದ ವಿಮೆಯು ನಿಮ್ಮ ಈ ಅತ್ಯಮೂಲ್ಯ ವಸ್ತುವನ್ನು ಸುರಕ್ಷಿತವಾಗಿಸುತ್ತದೆ. ಮನೆ ಅಥವಾ ಬ್ಯಾಂಕ್'ನಲ್ಲಾಗುವ ಅವಘಡ/ ಅನಪೇಕ್ಷಿತ ದುರಂತಗಳಿಂದ ವಿಮೆಯು ನಿಮಗಾಗುವ ನಷ್ಟವನ್ನು ತಡೆಯುತ್ತದೆ.
ಚಿನ್ನದ ವಿಮೆ ಬಗ್ಗೆ:
ನೀವು ಬರೇ ಚಿನ್ನವನ್ನು ವಿಮೆ ಮಾಡಬಹುದು ಅಥವಾ ಗೃಹ ವಿಮೆಯೊಂದಿಗೆ ಸೇರಿಸಿಯೂ ಮಾಡಬಹುದಾಗಿದೆ. ಅಕಸ್ಮಿಕ, ದರೋಡೆ, ಕಳ್ಳತನ ಅಥವಾ ಬ್ಯಾಂಕ್ ಲಾಕರ್'ನಲಲ್ಲಿಟ್ಟ ಚಿನ್ನದ ನಷ್ಟದಿಂದಲೂ ವಿಮೆಯು ನಿಮ್ಮ ಚಿನ್ನಕೆ ಸುರಕ್ಷತೆಯನ್ನು ಒದಗಿಸುತ್ತದೆ. ನೀವು ಧರಿಸಿದ್ದ ಸಂದರ್ಭದಲ್ಲಾಗುವ ಚಿನ್ನ ಕಳ್ಳತನ/ದರೋಡೆಗೂ ಕೆಲವು ಕಂಪನಿಗಳು ವಿಮಾ ಸೌಲಭ್ಯವನ್ನು ಒದಗಿಸುತ್ತವೆ. ಆದರೆ ಅವುಗಳಿಗೆ ಶರತ್ತು ಅನ್ವಯಿಸುತ್ತದೆ. ಕಳ್ಳತನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು, ಸಾಕ್ಷಿಗಳನ್ನು ಸಲ್ಲಿಸುವುದು ಇತ್ಯಾದಿಗಳನ್ನು ಮಾಡಬೇಕಾಗುತ್ತದೆ.
ಹೆಚ್ಚಿನ ಕಂಪನಿಗಳು ನಿಗದಿತ ವಿಮಾ ಮೊತ್ತವನ್ನು ಮಾತ್ರ ಒದಗಿಸುತ್ತವೆ. ಆದರೆ ಸಂಪೂರ್ಣ ಮೊತ್ತದ ವಿಮೆಯನ್ನು ಮಾಡಿಕೊಳ್ಳುವ ಸೌಲಭ್ಯವು ಲಭ್ಯವಿದೆ. ಅಂತಹ ವಿಶೇಷ ವಿಮೆಯ ಕಂತಿನ ಮೊತ್ತವೂ ಕೂಡಾ ಹೆಚ್ಚಿರುತ್ತದೆ ಆದರೆ, ಯುದ್ಧ, ಭಯೋತ್ಪಾದನಾ ಕೃತ್ಯ, ಗಲಭೆಗಳ ಸಂದರ್ಭಗಳಲ್ಲಿ ಆಗುವ ಹಾನಿಯನ್ನು ವಿಮಾ ಕಂಪನಿಗಳು ಭರಿಸುವುದಿಲ್ಲ.
ಮನೆ ಮಾಲೀಕ, ಕುಟುಂಬ ಸದಸ್ಯ, ಮನೆ ಮೇಲ್ವಿಚಾರಕ ಅಥವಾ ಕೆಲಸದಾಳುಗಳಿಂದ ಉಂಟಾಗುವ ನಷ್ಟವನ್ನು ಭರಿಸುವ ಜವಾಬ್ದಾರಿಯನ್ನು ವಿಮಾ ಕಂಪನಿಗಳು ಹೊರುವುದಿಲ್ಲ. 30 ದಿನಕ್ಕಿಂತ ಹೆಚ್ಚು ಖಾಲಿಯಿರುವ ಮನೆಯಿಂದ ಚಿನ್ನವು ಕಳವಾಗಿದ್ದಲ್ಲಿ ಕೂಡಾ ವಿಮಾ ಕಂಪನಿಗಳು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ.
ಕಂತುಗಳು ಹಾಗೂ ಇನ್ನಿತರ ಮುಖ್ಯ ವಿಷಯಗಳು:
ವಿಮೆ ಖರೀದಿಸಲು ಹಾಗೂ ವಿಮಾ ಮೊತ್ತವನ್ನು ಪಡೆಯಲು ಕಂಪನಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾದುದು ಕಡ್ಡಾಯ. ಆದುದರಿಂದ ವಿಮೆ ಮಾಡಿಸಿಕೊಂಡಿರುವವರು ಚಿನ್ನವನ್ನು ಖರೀದಿಸಿದ ರಶೀದಿಗಳನ್ನು ಜೋಪಾನವಾಗಿಡಬೇಕು. ಕಂತಿನ ಮೊತ್ತವನ್ನು ನಿರ್ಧರಿಸಲು ಕೆಲವು ಕಂಪನಿಗಳು ನಿಮ್ಮ ಬಳಿಯಿರುವ ಚಿನ್ನದ ಮೌಲ್ಯವನ್ನು ಅವರ ಪರೀಕ್ಷಕರಿಂದ ಪರೀಕ್ಷಿಸಿ ಲೆಕ್ಕಹಾಕುತ್ತವೆ. ಇನ್ನು ಕೆಲವು ಕಂಪನಿಗಳು, ನೀವು ಘೋಷಿಸಿದ ಮೊತ್ತದ ಆಧಾರದ ಮೇಲೆ ಕಂತಿನ ಮೊತ್ತವನ್ನು ನಿರ್ಧರಿಸುತ್ತವೆ, ಇಂತಹುದರಲ್ಲಿ ಕಂತಿನ ಮೊತ್ತದ ಪ್ರಮಾಣವು ಹೆಚ್ಚಾಗಿರುತ್ತದೆ.
ಚಿನ್ನದ ಪ್ರಮಾಣದ ಆಧಾರದಲ್ಲಿ ವಿಮಾ ಕಂತು ನಿರ್ಧಾರವಾಗುತ್ತದೆ. ವಿಮೆ ಮಾಡುವ ಸಮಯದಲ್ಲಿ ಚಿನ್ನದ ಮಾರುಕಟ್ಟೆ ಮೌಲ್ಯ, ಚಿನ್ನಾಭರಣದ ಸ್ಥಿತಿ, ಕಂಪನಿಯ ಯೋಜನೆಗಳು ಕಂತಿನ ಮೊತ್ತವನ್ನು ನಿರ್ಧರಿಸುವಲ್ಲಿ ಪರಿಗಣಿಸಲಾಗುತ್ತದೆ.

ಆಧಿಲ್ ಶೆಟ್ಟಿ
ಸಿಇಓ, ಬ್ಯಾಂಕ್ ಬಝಾರ್
