ದೈಹಿಕ ಸಂಪರ್ಕ ಅಥವಾ ಲೈಂಗಿಕವಾಗಿ ನಿರ್ಧರಿಸಿದ ವರ್ತನೆಗಳು ಮಾತ್ರ ಲೈಂಗಿಕ ಕಿರುಕುಳವಾಗುತ್ತವೆ

ನವದೆಹಲಿ(ನ.02): ಎಲ್ಲ ರೀತಿಯ ಇಷ್ಟವಿಲ್ಲದ ದೈಹಿಕ ಸ್ಪರ್ಶ ಲೈಂಗಿಕ ಕಿರುಕುಳವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯ(ಸಿಎಸ್'ಐಆರ್) ಉದ್ಯೋಗಿಯೊಬ್ಬರು ತಮ್ಮ ಸಹೋದ್ಯೋಗಿಯೊಬ್ಬ ನೀಡಿದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರನ್ನು ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.

ಸಿಎಸ್ಐಆರ್ ಸಂಸ್ಥೆಯ ಮಹಿಳೆಯೊಬ್ಬರು ತಾವು ಕಾರ್ಯನಿರ್ವಹಿಸುವ ಪ್ರಯೋಗಾಲಯದಲ್ಲಿ ಸಹೋದ್ಯೋಗಿಯೊಬ್ಬರು ತಾವು ನಿರ್ವಹಿಸುತ್ತಿದ್ದ ಯಂತ್ರವನ್ನು ಸ್ಥಗಿತಗೊಳಿಸಿದರು. ನಂತರ ಪ್ರಯೋಗಾಲಯದಿಂದ ಹೊರಗೆ ನನ್ನನ್ನು ನೂಕಿ ಬೀಗ ಹಾಕಿಕೊಂಡರು. ಅಲ್ಲದೆ ತಮ್ಮ ಮೈಯನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದರು' ಎಂದು ದೂರು ನೀಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಭು ಬಾಕ್ರು, ದೈಹಿಕ ಸಂಪರ್ಕ ಅಥವಾ ಲೈಂಗಿಕವಾಗಿ ನಿರ್ಧರಿಸಿದ ವರ್ತನೆಗಳು ಮಾತ್ರ ಲೈಂಗಿಕ ಕಿರುಕುಳವಾಗುತ್ತವೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ತಾವು ನೀಡಿದ ದೂರಿನಲ್ಲಿ ಕಂಡು ಬಂದಂತೆ ಯಾವುದೇ ರೀತಿಯ ಲೈಂಗಿಕ ರೀತಿಯ ಚಟುವಟಿಕೆಗಳು ನಡೆದಿಲ್ಲ'. ಆರೋಪಿ ಮಹಿಳೆಯ ತೋಳನ್ನು ಹಿಡಿದು ತಳ್ಳಿರುವುದು' ಲೈಂಗಿಕ ಕಿರುಕುಳವೆನಿಸಿಕೊಳ್ಳುವುದಿಲ್ಲ. ಇದು ಕಿರುಕುಳವೆ ವಿನಃ ಲೈಂಗಿಕ ಕಿರುಕುಳವಲ್ಲ'. ಅದೇ ರೀತಿ ಲೈಂಗಿಕ ಸ್ವಭಾವದ ಯಾವುದೇ ದೈಹಿಕ ಸಂಪರ್ಕವಿಲ್ಲದಿದ್ದರೂ ಅದು ಲೈಂಗಿಕ ಕಿರುಕುಳವಾಗುವುದಿಲ್ಲ' ಎಂದು ತೀರ್ಪು ನೀಡಿದರು.