Asianet Suvarna News Asianet Suvarna News

ಮಳೆಗಾಲದ ಆರಂಭದಲ್ಲೇ ತುಂಬಿ ಹರಿಯುತ್ತಿವೆ ಜಲಾಶಯಗಳು

ಮುಂಗಾರಿನ ಅಬ್ಬರ ಜೋರಾಗಿದೆ. ಸತತ ಮಳೆ ಇಲ್ಲದೆ ಕಂಗೆಟ್ಟಿದ್ದ ಕರುನಾಡು ಮಳೆರಾಯನ ಸಿಂಚನದಿಂದ ಹಚ್ಚ ಹಸುರಾಗಿದೆ. ಕೆರೆ ಕಟ್ಟೆಗಳು ಮೈದುಂಬಿವೆ. ಒಣಗಿ ಹೋಗಿದ್ದ ಗಿಡಮರಗಳು ವರುಣನ ಕೃಪೆಯಿಂದಾಗಿ ಜೀವಕಳೆ ತುಂಬಿಕೊಂಡಿವೆ. ನಿಸರ್ಗ ಸೌಂದ ರ್ಯ ಕೈಬೀಸಿ ಕರೆಯುತ್ತಿದೆ. ನೇಗಿಲಯೋಗಿ ರೈತನ ಕೃಷಿಗನಸು ಗರಿಗೆದರಿದೆ. ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಳೆಗೆ ತಂಪೆರೆದ ಮುಂಗಾರಿನಿಂದ ಭರ್ತಿಯಾಗುತ್ತಿರುವ ರೈತರ ಜೀವನಾಡಿಯಾದ ಜಲಾಶಯಗಳ ಸದ್ಯದ ವಿಹಂಗಮ ನೋಟ ಇಲ್ಲಿದೆ.  
 

All  Reservoir fulled now

ಮುಂಗಾರಿನ ಅಬ್ಬರ ಜೋರಾಗಿದೆ. ಸತತ ಮಳೆ ಇಲ್ಲದೆ ಕಂಗೆಟ್ಟಿದ್ದ ಕರುನಾಡು ಮಳೆರಾಯನ ಸಿಂಚನದಿಂದ ಹಚ್ಚ ಹಸುರಾಗಿದೆ. ಕೆರೆ ಕಟ್ಟೆಗಳು ಮೈದುಂಬಿವೆ. ಒಣಗಿ ಹೋಗಿದ್ದ ಗಿಡಮರಗಳು ವರುಣನ ಕೃಪೆಯಿಂದಾಗಿ ಜೀವಕಳೆ ತುಂಬಿಕೊಂಡಿವೆ. ನಿಸರ್ಗ ಸೌಂದ ರ್ಯ ಕೈಬೀಸಿ ಕರೆಯುತ್ತಿದೆ. ನೇಗಿಲಯೋಗಿ ರೈತನ ಕೃಷಿಗನಸು ಗರಿಗೆದರಿದೆ. ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಳೆಗೆ ತಂಪೆರೆದ ಮುಂಗಾರಿನಿಂದ ಭರ್ತಿಯಾಗುತ್ತಿರುವ ರೈತರ ಜೀವನಾಡಿಯಾದ ಜಲಾಶಯಗಳ ಸದ್ಯದ ವಿಹಂಗಮ ನೋಟ ಇಲ್ಲಿದೆ.  

ಸುಪಾ
ಸುಪಾ ಜಲಾಶಯ ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿದೆ. ಕಾಳಿ ನದಿಗೆ 1958 ರಲ್ಲಿ ಆಣೆಕಟ್ಟೆ ಕಟ್ಟಲಾಗಿದೆ. ಜೋಯಿಡಾ ತಾಲೂಕಿನ ಡಿಗ್ಗಿ ಸಮೀಪದ ಕುಶಾವಳಿಯಲ್ಲಿ ಕಾಳಿ ನದಿ ಉಗಮ ತಾಣ. ಹೀಗಾಗಿ ಜೋಯಿಡಾ, ದಾಂಡೇಲಿಗಳಲ್ಲಿ ಮಳೆ ಚೆನ್ನಾಗಿ ಆದರೆ ಜಲಾಶಯದ ಒಳ ಹರಿವು ಹೆಚ್ಚುತ್ತದೆ. ಇದು ವಿದ್ಯುತ್ ಉತ್ಪಾದನೆಗೆಂದೇ ಇರುವ ಅಣೆಕಟ್ಟು.ಇಲ್ಲಿಎರಡು ವಿದ್ಯುತ್ ಘಟಕಗಳು  ಪೀಕ್ ಅವರ್‌ಗಳಲ್ಲಿ ಅಂದರೆ ಸಂಜೆ ವೇಳೆ ಬೇಡಿಕೆ ಇದ್ದಾಗ ವಿದ್ಯುತ್ ಉತ್ಪಾದಿಸಲಾಗುತ್ತದೆ. ಉತ್ಪಾದಿತ ವಿದ್ಯುತ್  ಧಾರವಾಡದ ನರೇಂದ್ರದಲ್ಲಿನ ಗ್ರಿಡ್‌ಗೆ ಪೂರೈಕೆಯಾಗುತ್ತದೆ. ಅಲ್ಲಿಂದ ರಾಜ್ಯದ ವಿವಿಧೆಡೆ ಸರಬರಾಜು ಆಗುತ್ತದೆ. ಇಲ್ಲಿ ತಲಾ 50 ಮೆ.ವ್ಯಾ.ಗಳ ಎರಡು ವಿದ್ಯುತ್ ಘಟಕಗಳಿವೆ. 

ಕಬಿನಿ
ಕಾವೇರಿಯ ಉಪನದಿಯಾದ ಕಪಿಲಾ ನದಿಗೆ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾ. ಬೀಚನ ಹಳ್ಳಿ ಬಳಿ ಅಡ್ಡಲಾಗಿ ಕಟ್ಟಲಾಗಿರುವ ಜಲಾಶಯ ಕಬಿನಿ. ಕೇರಳದ ವೈನಾಡಿನಲ್ಲಿ ಉತ್ತಮವಾಗಿ ಮಳೆಯಾದಲ್ಲಿ ಜುಲೈ ತಿಂಗಳ ಮಧ್ಯ ಭಾಗದಲ್ಲಿ ಜಲಾಶಯ ಭರ್ತಿಯಾಗುತ್ತದೆ. ಇದೀಗ ಒಳಹರಿವು 21.500 ಕ್ಯುಸೆಕ್ ಇದ್ದು, ಜಲಾಶಯದಿಂದ 5.000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ನೀರು ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ, ಮೈಸೂರುಗಳಿಗೆ ಕೃಷಿ ಹಾಗೂ ಕುಡಿಯುವುದಕ್ಕೂ ಬಳಕೆಯಾಗುತ್ತದೆ.

ಹೇಮಾವತಿ
ಹೇಮಾವತಿ ಜಲಾಶಯ ಹಾಸನ ತಾಲೂಕು ಗೊರೂರಿನಲ್ಲಿದೆ. ಈ ಜಲಾಶಯದಿಂದ ಹಾಸನ ಜಿಲ್ಲೆ  ಮಾತ್ರವಲ್ಲದೆ ಮಂಡ್ಯ, ಮೈಸೂರು, ಜಿಲ್ಲೆಗಳ  6720 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಈ ಜಲಾಶಯದಿಂದ ಬಾಗೂರು ನವಿಲೆ ನಾಲೆ ಮೂಲಕ ಕುಡಿಯವ ನೀರನ್ನು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ 2898.25 ಅಡಿ ನೀರು ಸಂಗ್ರಹವಾಗಿದ್ದು, 200  ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ 18.92 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ 3.18 ಟಿಎಂಸಿ ನೀರು ಸಂಗ್ರಹವಾಗಿತ್ತು.

ಕಾರಂಜಾ
ಕೃಷಿ ಮತ್ತು ಕುಡಿಯುವ ನೀರಿಗೆ ಬಳಕೆಯಾಗುವ ಕಾರಂಜಾ ಜಲಾಶಯದಲ್ಲಿ ಮಳೆಯಿಂದಾಗಿ ನೀರು ಹರಿದು ಬರುತ್ತಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಕಾರಂಜಾ ಜಲಾಶಯಕ್ಕೆ ಗೋದಾವರಿ ನದಿಯ ಉಪ ನದಿ ಮಾಂಜ್ರಾಕ್ಕೆ ಹೊಂದಿಕೊಂಡಿದ್ದು, ತೆಲಂಗಾಣಾದ ಜಹೀರಾಬಾದ್, ನಾರಂಜಾ ನದಿ ಪಾತ್ರ, ಹುಮನಾಬಾದ್‌ನ ವಿವಿಧೆಡೆಯಿಂದ ನೀರು ಹರಿದು ಬರುತ್ತದೆ. ಪ್ರಸ್ತುತ 1908.37 ಅಡಿ ನೀರಿದೆ. ಮುಂಗಾರಿನಲ್ಲಿ 33,630 ಹೆಕ್ಟೇರ್ ಮತ್ತು ಹಿಂಗಾರಿನಲ್ಲಿ 13,598 ಹೆಕ್ಟೇರ್‌ಗೆ ನೀರು ಒದಗಿಸುತ್ತದೆ.

ತುಂಗಭದ್ರಾ ಜಲಾಶಯ

ಕೊಪ್ಪಳ ತಾಲೂಕಿನ ಮುನಿರಾಬಾದ್  ಗ್ರಾಮದ ಬಳಿ ತುಂಗಭದ್ರಾ ನದಿಗೆ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 1600.36 ಅಡಿಯಿದ್ದು 20.083 ಟಿಎಂಸಿ ನೀರು ಸಂಗ್ರಹಗೊಂಡಿದೆ.  ತುಂಗಭದ್ರಾ ಜಲಾಶಯದ ನಿರ್ಮಾಣದ ವೇಳೆ 134 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಜಲಾಶಯ ಹೊಂದಿತ್ತು. ಈಗ 33 ಟಿಎಂಸಿ ಹೂಳು ತುಂಬಿದೆ. ಜಲಾಶಯ ಒಟ್ಟು 12  ಲಕ್ಷ ಎಕರೆಗೆ ನೀರು ಒದಗಿಸುವ ಸಾಮರ್ಥ್ಯ ಹೊಂದಿದ್ದು, ಅದು ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳು ಮತ್ತು ಆಂಧ್ರ, ತೆಲಂಗಾಣವನ್ನು ಒಳಗೊಂಡಿದೆ.

ಹಾರಂಗಿ
ಹಾರಂಗಿ ಜಲಾಶಯ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನಲ್ಲಿದೆ. ಜಲಾಶಯಕ್ಕೆ ಸೋಮವಾರ ಪೇಟೆ ಹಾಗೂ ಮಡಿಕೇರಿ, ಮಾದಾಪುರ ಭಾಗದಿಂದ ನೀರು ಹರಿದು ಬರುತ್ತದೆ. ಜಲಾಶಯದಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ, ಹಾಸನ ಜಿಲ್ಲೆಯ ಅರಕಲಗೂಡು ಗಡಿಭಾಗ ಹಾಗೂ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ ತಾಲೂಕಿನ ಜನತೆ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಪ್ರಸಕ್ತ ನೀರಿನ ಮಟ್ಟ 2829.73 ಅಡಿಯಷ್ಟಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ  8.5 ಟಿಎಂಸಿ. ಪ್ರಸ್ತುತ 3.3 ಟಿಎಂಸಿ ನೀರು ಇದೆ.

ಲಿಂಗನಮಕ್ಕಿ
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆಂದೇ ನಿರ್ಮಾಣವಾಗಿರುವ ಜಲಾಶಯಗಳಲ್ಲಿ ಪ್ರಮುಖವಾದುದ್ದು ಲಿಂಗನಮಕ್ಕಿ ಜಲಾಶಯ. ಇಲ್ಲಿ ಸಂಗ್ರಹವಾಗುವ ನೀರು, ವಿದ್ಯುತ್ ಉತ್ಪಾದನೆಗೆ ಮಾತ್ರ ಉಪಯೋಗವಾಗುತ್ತಿದ್ದು ಒಟ್ಟು ಗರಿಷ್ಠ 1035 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಜಲಾಶಯದ ನೀರು ಬಳಕೆಯಾಗುತ್ತದೆ. ಭದ್ರಾ ಜಲಾಶಯವು ಸಂಪೂರ್ಣವಾಗಿ ಕೃಷಿ ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದು, ಶಿವಮೊಗ್ಗ, ಚಿಕ್ಕಮಗಳೂರಿನ ತರೀಕೆರೆ, ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲಿ ಜಲಾಶಯದ ಸುಮಾರು 20 ಸಾವಿರ ಹೆಕ್ಟೇರ್ ಜಲಾನಯನ ಪ್ರದೇಶವಿದೆ.

ಕೆಆರ್‌ಎಸ್
ಕಾವೇರಿ ನದಿಯ ಅಡ್ಡಲಾಗಿ ಕೃಷ್ಣರಾಜ ಸಾಗರದಲ್ಲಿ ಕಟ್ಟಲಾಗಿರುವ ಕನ್ನಂಬಾಡಿ ಅಣೆಕಟ್ಟೆ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ. ಕೃಷ್ಣರಾಜ ಸಾಗರ ಜಲಾಶಯಕ್ಕೆ ಹಾರಂಗಿ , ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಯ ಮೂಲಕ ನೀರು ಹರಿದು ಬರುತ್ತದೆ. ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾದಾಗ ಹಾರಂಗಿ ಜಲಾಶಯ ಹಾಗೂ ಹೇಮಾವತಿ ಅಣೆಕಟ್ಟೆಯಿಂದ ಬಿಡುಗಡೆ ಮಾಡುವ ನೀರು ಕೆಆರ್‌ಎಸ್ ಜಲಾಶಯದಲ್ಲಿ
ಸಂಗ್ರಹವಾಗುತ್ತದೆ. ಕಳೆದ 10 ವರ್ಷಗಳಲ್ಲಿ ಜೂನ್ ಮಧ್ಯಭಾಗದಲ್ಲಿ 100 ಅಡಿ ನೀರು ಬಂದಿರುವುದು ಇದೇ ಮೊದಲು.

ಜಲಾಶಯದಿಂದ ಬಿಡುಗಡೆಯಾಗುವ ನೀರು ಶ್ರೀರಂಗಪಟ್ಟಣದಲ್ಲಿ ಮೂಲಕ ಹರಿದು ಮುಂದೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ, ತೊರೆಕಾಡನಹಳ್ಳಿಗೆ ತಲುಪಲಿದೆ. ನಂತರ ಮುತ್ತತ್ತಿಗೆ ಹೋಗಿ ಅಲ್ಲಿಂದ ತಮಿಳುನಾಡಿಗೆ ಹರಿಯಲಿದೆ. ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿ ಮೂಲಕ ಹರಿಯುವ ನೀರನ್ನು ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ಮದ್ದೂರು, ಮಳವಳ್ಳಿ ಸೇರಿದಂತೆ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿಗೆ ಬಳಸಲಾಗುತ್ತದೆ. ಅಲ್ಲದೇ 1.80 ಲಕ್ಷ ಹೆಕ್ಟೇರ್ ಪ್ರದೇಶದ ಭೂಮಿಗೆ ನೀರಾವರಿಗೂ ಕೂಡ ಕಾವೇರಿ ನೀರು  ಬಳಕೆಯಾಗಲಿದೆ.

Follow Us:
Download App:
  • android
  • ios