ಚೆನ್ನೖ : ತಮಿಳುನಾಡು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆಯೇ ಇದೀಗ ಎಲ್ಲವೂ ಸರಿಯಾಗಿಲ್ಲ ಎನ್ನುವುದು ತಿಳಿದು ಬಂದಿದೆ. 

ತಮಿಳುನಾಡು ಸಿಎಂ ಒ. ಪಳನಿಸ್ವಾಮಿ ಹಾಗೂ ತಮಿಳುನಾಡು ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. 

ಇದು ಜುಲೈ 16 ರಿಂದ ಇಬ್ಬರ ನಡುವೆ ಸಣ್ಣ ಪ್ರಮಾಣದಲ್ಲಿ ಮುನಿಸು ಆರಂಭಕ್ಕೆ ಕಾರಣವಾಗುವ ಘಟನೆಗ ನಡೆದಿದ್ದು, ಅಂದು  ಹೈ ವೇ ಕಂಟ್ರಾಕ್ಟರ್ ಮನೆಯ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು,  ಅದೇ ದಿನ ಸಂಜೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಾಯ್ತು. 

ಈ ವೇಳೆ ಒ. ಪನ್ನೀರ್ ಸೆಲ್ವಂ ಅವರು ಸಂಚಾಲನ ಸಮಿತಿಯ ಬಗ್ಗೆ ವಿಚಾರವನ್ನು ಪ್ರಸ್ತಾಪ ಮಾಡಿದರು. ಅಲ್ಲದೇ ಈ ವೇಳೆ ಅನೇಕ ಕಾಲದಿಂದ ಸಂಚಾಲನ ಸಮಿತಿ ರಚನೆ ಹಾಗೂ ಅಲ್ಲದೇ ಪಕ್ಷದಲ್ಲಿ ಅತ್ಯಧಿಕ ಸಂಖ್ಯೆಯ ಪೋಸ್ಟ್ ಗಳು ಕಾಲಿ ಇದ್ದು ಅವುಗಳನ್ನು ಭರ್ತಿ ಮಾಡುವಲ್ಲಿಯೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ವಿಚಾರವನ್ನು ಎತ್ತಿದರು.  

ಅಲ್ಲದೇ ಈ ವೇಳೆ ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆಯೂ ಕೂಡ ವಿವಿಧ ರೀತಿಯ ಚರ್ಚೆ ನಡೆಸಲಾಗಿದ್ದು, ಆದರೆ ಈ ಬಗ್ಗೆ ಯಾವುದೇ ಕ್ರಮವನ್ನೂ ಕೂಡ ಕೈಗೊಳ್ಳುತ್ತಿಲ್ಲ ಎನ್ನುವುದನ್ನು ಒಪಿಎಸ್ ಪ್ರಸ್ತಾಪ ಮಾಡಿದರು. ಅಲ್ಲದೇ ಪಳನಿಸ್ವಾಮಿ ನೇತೃತ್ವದಲ್ಲಿ ಎಲ್ಲವೂ ಸೂಕ್ತವಾಗಿ ಸಾಗುತ್ತಿಲ್ಲ ಎನ್ನುವುದರ ಬಗ್ಗೆಯೂ ಕೂಡ ಅಸಮಧಾನಗೊಂಡರು ಎನ್ನಲಾಗಿದೆ. 

ಇದರಿಂದ ಎಲ್ಲವೂ ಕೂಡ ಇಬ್ಬರ ನಡುವೆ ಸರಿಯಾಗಿಲ್ಲ ಎನ್ನುವ ಸೂಚನೆಗಳು ಇದೀಗ ದೊರಕಿವೆ.