ಬೆಂಗಳೂರು, [ಸೆ. 28]: ನೀರ್ ದೋಸೆ ಚಿತ್ರದ ಫೋಟೋ ವಿವಾದದಲ್ಲಿ ಚಿತ್ರನಟಿ, ಮಂಡ್ಯ ಮಾಜಿ ಸಂಸದೆ ರಮ್ಯಾ ಗೆ ಹಿನ್ನಡೆಯಾಗಿದೆ. 

ನೀರ್ ದೋಸೆ ಚಿತ್ರದ ಶೂಟಿಂಗ್ ಸಮಯದ ಅನುಮತಿಯಿಲ್ಲದೆ ಫೋಟೋ ಪ್ರಕಟಿಸಿದ್ದಾರೆಂದು ಪತ್ರಕರ್ತ ಶ್ಯಾಮ್ ಪ್ರಸಾದ್, ಫೋಟೋ ಜರ್ನಲಿಸ್ಟ್ ಕೆಎನ್ ನಾಗೇಶ್ ಕುಮಾರ್ ಮತ್ತು ಮನೋಹರ್  ವಿರುದ್ಧ ರಮ್ಯಾ ದೂರು ದಾಖಲಿಸಿದ್ದರು.

ಆ ಪ್ರಕರಣವನ್ನು ಇಂದು ಕೈಗೆತ್ತಿಕೊಂಡಿದ್ದ 1 ನೇ ಎಸಿಎಂಎಂ ಕೋರ್ಟ್, ಪತ್ರಕರ್ತ ಶ್ಯಾಮ್ ಪ್ರಸಾದ್, ಫೋಟೋ ಜರ್ನಲಿಸ್ಟ್ ಕೆಎನ್ ನಾಗೇಶ್ ಕುಮಾರ್, ಮನೋಹರ್ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಇದ್ರಿಂದ ರಮ್ಯಾಗೆ ಮುಖಭಂಗವಾಗಿದೆ.