ಇತಿಹಾಸದಲ್ಲೇ ಇದೊಂದು ಅತಿದೊಡ್ಡ ದತ್ತಾಂಶ ಕಳವು ಎಂದು ಪರಿಗಣಿಸಲಾಗಿದೆ.

ಬೋಸ್ಟನ್(ಅ.05): ತನ್ನ ಸೇವೆಯಲ್ಲಿರುವ ಎಲ್ಲ 3 ಶತಕೋಟಿ ಖಾತೆದಾರರ ಖಾಸಗಿ ಮಾಹಿತಿ ಕಳವಾಗಿದ್ದನ್ನು ಯಾಹೂ ಒಪ್ಪಿಕೊಂಡಿದೆ.

ಇತಿಹಾಸದಲ್ಲೇ ಇದೊಂದು ಅತಿದೊಡ್ಡ ದತ್ತಾಂಶ ಕಳವು ಎಂದು ಪರಿಗಣಿಸಲಾಗಿದೆ. 2013 ಆಗಸ್ಟ್‌'ನಲ್ಲಿ ದತ್ತಾಂಶ ಕಳವಾದ ಎಲ್ಲ ಬಳಕೆದಾರರ ಹೆಚ್ಚುವರಿ ಖಾತೆಗಳಿಗೆ ಎಚ್ಚರಿಕೆಯ ಇ-ಮೇಲ್‌'ಗಳನ್ನು ರವಾನಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.

ದತ್ತಾಂಶ ಕಳವಾದ ಬಗ್ಗೆ ಯಾಹೂ ಡಿಸೆಂಬರ್‌'ನಲ್ಲಿ ವಿಷಯ ಬಹಿರಂಗಪಡಿಸಿತ್ತು. ಆದರೆ 1 ಶತಕೋಟಿ ಬಳಕೆದಾರರ ಮಾಹಿತಿ ಮಾತ್ರ ಕಳವಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲ ಖಾತೆಗಳ ದತ್ತಾಂಶ ಕಳವಾದ ಬಗ್ಗೆ ಕಳವಳ ವ್ಯಕ್ತವಾಗಿದೆ