ನವದೆಹಲಿ[ಸೆ.07]: ಆಮ್‌ ಆದ್ಮಿ ಪಕ್ಷದ ಅತೃಪ್ತ ನಾಯಕಿ ಅಲಕಾ ಲಾಂಬ ಅವರು ಟ್ವೀಟರ್‌ ಮೂಲಕ ಪಕ್ಷಕ್ಕೆ ಶುಕ್ರವಾರ ರಾಜೀನಾಮೆ ಪ್ರಕಟಿಸಿದ್ದಾರೆ. ಬೆನ್ನಲ್ಲೇ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ‘ಇದು ಆಪ್‌ಗೆ ಗುಡ್‌ ಬೈ ಹೇಳುವ ಸಮಯವಾಗಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕಳೆದ ಆರು ವರ್ಷಗಲ್ಲಿ ಸಾಕಷ್ಟುಕಲಿತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡದೇ ತಟಸ್ಥವಾಗಿದ್ದ ಅವರು, ಲೋಕಸಭಾ ಚುನಾವಣೆ ಸೋಲಿಗೆ ಕೇಜ್ರಿವಾಲ್‌ ಹೊಣೆ ಎಂದು ಹೇಳಿದ್ದಕ್ಕೆ ಅವರನ್ನು ಆಪ್‌ ಶಾಸಕರ ಅಧಿಕೃತ ವಾಟ್ಸಪ್‌ ಗ್ರೂಪಿನಿಂದ ಹೊರ ಹಾಕಲಾಗಿತ್ತು. ಆಪ್‌ಗೆ ಸೇರುವ ಮುನ್ನ 20 ವರ್ಷಗಳ ಕಾಲ ಲಂಬಾ ಕಾಂಗ್ರೆಸ್‌ನಲ್ಲಿದ್ದರು. ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಸದ್ಯ ಕಾಂಗ್ರೆಸ್‌ಗೆ ಸೇರ್ಪಡೆಯಾದ ಅಲಕಾ ಲಾಂಬಗೆ ತರಬೇತಿ ನೀಡುವ ಹೊಣೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್‌ಗೆ ವಹಿಸಲಾಗಿದೆ.