ರಾಷ್ಟ್ರಪತಿ ಕ್ಷಮೆಯಾಚನೆಗೆ ಮಸ್ಲಿಂ ವಿವಿ ವಿದ್ಯಾರ್ಥಿಗಳ ಆಗ್ರಹ

First Published 2, Mar 2018, 8:22 AM IST
Aligarh Muslim University Students ask president Ram Nath Kovind to Apologise
Highlights

‘ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರನ್ನು ಪರಿಶಿಷ್ಟ ಜಾತಿಗಳ ಅಡಿ ಸೇರಿಸಲಾಗದು. ಆ ಧರ್ಮಗಳು ಭಾರತಕ್ಕೆ ಪರಕೀಯ’ ಎಂದು 2010ರಲ್ಲಿ ನೀಡಿದ ಹೇಳಿಕೆ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸಿದ ಬಳಿಕವೇ ಅವರು ಅಲಿಗಢ ಮುಸ್ಲಿಂ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಬೇಕು ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

ಲಖನೌ: ‘ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರನ್ನು ಪರಿಶಿಷ್ಟ ಜಾತಿಗಳ ಅಡಿ ಸೇರಿಸಲಾಗದು. ಆ ಧರ್ಮಗಳು ಭಾರತಕ್ಕೆ ಪರಕೀಯ’ ಎಂದು 2010ರಲ್ಲಿ ನೀಡಿದ ಹೇಳಿಕೆ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸಿದ ಬಳಿಕವೇ ಅವರು ಅಲಿಗಢ ಮುಸ್ಲಿಂ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಬೇಕು ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

‘ತಮ್ಮ ಹೇಳಿಕೆಗೆ ರಾಷ್ಟ್ರಪತಿಯವರು ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸ ಕೂಡದು. ವಿದ್ಯಾರ್ಥಿಗಳಲ್ಲಿ ಪ್ರತಿರೋಧದ ಭಾವನೆಯಿದೆ, ಏನಾದರೂ ಅಹಿತಕರವಾದುದು ನಡೆದರೆ ರಾಷ್ಟ್ರಪತಿ ಮತ್ತು ಕುಲಪತಿಯವರೇ ಹೊಣೆ’ ಎಂದು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಜ್ಜದ್‌ ಸುಭಾನ್‌ ಹೇಳಿದ್ದಾರೆ.

2010ರಲ್ಲಿ ರಂಗನಾಥ ಮಿಶ್ರಾ ಆಯೋಗದ ವರದಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯ ಶಿಫಾರಸು ಮಾಡಿದ್ದಾಗ, ಮುಸ್ಲಿಮರನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಆಗ ಬಿಜೆಪಿ ವಕ್ತಾರರಾಗಿದ್ದ ಕೋವಿಂದ್‌ ಹೇಳಿದ್ದರು. ಸಿಖ್ಖರಿಗೆ ಮೀಸಲಾತಿ ನೀಡುವ ಬಗ್ಗೆ ಪ್ರಶ್ನಿಸಿದಾಗ, ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಭಾರತಕ್ಕೆ ಪರಕೀಯ ಎಂದಿದ್ದರು.

loader