ಅಲ್ಜಿರಿಯಾ ವಿಮಾನ ಅಪಘಾತ : 100 ಮಂದಿ ಸಾವು

news | Wednesday, April 11th, 2018
Suvarna Web Desk
Highlights

100ಕ್ಕೂ ಅಧಿಕ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅಲ್ಜಿರಿಯಾದಲ್ಲಿ ಸೇನಾ ವಿಮಾನವೊಂದು ಅಪಘಾತಕ್ಕೀಡಾಗಿದೆ.

ಅಲ್ಜಿರಿಯಾ: 100ಕ್ಕೂ ಅಧಿಕ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅಲ್ಜಿರಿಯಾದಲ್ಲಿ ಸೇನಾ ವಿಮಾನವೊಂದು ಅಪಘಾತಕ್ಕೀಡಾಗಿದೆ.

ಟೇಕ್ ಆಗುವ ವೇಳೇ ಈ ಅವಘಡ ಸಂಭವಿಸಿದೆ.  ವಿಮಾನ ಅವಘಡಕ್ಕೆ ಕಾರಣವೇನು ಎನ್ನುವುದು ಇದುವರೆಗೂ ಕೂಡ ತಿಳಿದು ಬಂದಿಲ್ಲ.  ಸಂಬಂಧ ಈಗಾಗಲೇ ಅಲ್ಲಿನ ರಕ್ಷಣಾ ಸಚಿವಾಲಯವು ತನಿಖೆಗೆ ಆದೇಶಿಸಿದೆ.

 ವಿಮಾಣ ಅಪಘಾತಕ್ಕೆ ಈಡಾದ ಪ್ರದೇಶವಾದ ಬೌಫರಿಕ್ ಪ್ರದೇಶದಲ್ಲಿ  ತುರ್ತು ಸ್ಥಿತಿ ಘೋಷಣೆ ಮಾಡಲಾಗಿದೆ.

ವಿಮಾನವು ಸೈನಿಕರನ್ನು ಹೊತ್ತೊಯ್ಯುತಿತ್ತು. ಅದರಲ್ಲಿದ್ದ 100 ಮಂದಿಯೂ ಕೂಡ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಆದರೆ ಈ ಬಗ್ಗೆ ರಕ್ಷಣಾ ಇಲಾಖೆಯೂ ಯಾವುದೇ ನಿಖರವಾದ ಮಾಹಿತಿಯನ್ನೂ ಕೂಡ ನೀಡಿಲ್ಲ.

Comments 0
Add Comment

    Related Posts