ಅಲ್ಲದೆ, ವೈರಿಗಳ ಕಾರ್ಯ ಚಟುವಟಿಕೆ ಕುರಿತು ಎಚ್ಚರ ವಹಿಸುವಂತೆ ಹಾಗೂ ಎಲ್ಲದಕ್ಕೂ ಸನ್ನದ್ಧವಾಗಿರುವಂತೆ ಸೇನೆಗೆ ಕಿವಿಮಾತು ಹೇಳಿದ್ದಾರೆ

ಜಮ್ಮು(ನ.16): ಇಂಡಿಯಾ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿನ ಭದ್ರತೆ ಕುರಿತು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ವೈರಿಗಳ ಕಾರ್ಯ ಚಟುವಟಿಕೆ ಕುರಿತು ಎಚ್ಚರ ವಹಿಸುವಂತೆ ಹಾಗೂ ಎಲ್ಲದಕ್ಕೂ ಸನ್ನದ್ಧವಾಗಿರುವಂತೆ ಸೇನೆಗೆ ಕಿವಿಮಾತು ಹೇಳಿದ್ದಾರೆ. ಇದೇ ವೇಳೆ, ಭಾರತವು ತನ್ನ ತಂತ್ರಗಳಿಂದ ಪಾಕಿಸ್ತಾನವನ್ನು ಬೆದರಿಸಲು ಸಾಧ್ಯವಿಲ್ಲ ಮತ್ತು ಪಾಕಿಸ್ತಾನದ ಸಂಯಮವನ್ನು ನಮ್ಮ ದೌರ್ಬಲ್ಯವೆಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಶತ್ರುಗಳಿಂದ ನಮ್ಮ ನೆಲವನ್ನು ರಕ್ಷಿಸಿಕೊಳ್ಳಲು ನಾವು ಶಕ್ತರಾಗಿದ್ದಾವೆ ಎಂದು ಭಾರತಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ಎಚ್ಚರಿಕೆ ನೀಡಿದ್ದಾರೆ.