ದೇಶದಲ್ಲಿ ಇಳಿಕೆಯಾದ ಮದ್ಯ ಮಾರಾಟ ಪ್ರಮಾಣ

Alcohol sales fall
Highlights

ದೇಶದಲ್ಲಿ ಸತತ ಎರಡನೇ ವರ್ಷ ಮದ್ಯ ಮಾರಾಟ ಪ್ರಮಾಣ ಇಳಿಕೆಯಾಗಿರುವುದು ಕಂಡು ಬಂದಿದೆ.

ಮುಂಬೈ: ದೇಶದಲ್ಲಿ ಸತತ ಎರಡನೇ ವರ್ಷ ಮದ್ಯ ಮಾರಾಟ ಪ್ರಮಾಣ ಇಳಿಕೆಯಾಗಿರುವುದು ಕಂಡು ಬಂದಿದೆ.

ಹೆದ್ದಾರಿಗಳ ಬದಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದ ಸುಪ್ರೀಂ ಕೋರ್ಟ್ ಕ್ರಮ ಮತ್ತು ಕೆಲವು ರಾಜ್ಯಗಳಲ್ಲಿ ಮದ್ಯ ವಿತರಣೆ ನಿಯಮಗಳ ಬದಲಾವಣೆ, ನಿಷೇಧ ಮುಂತಾದ ಕ್ರಮಗಳ ಪರಿಣಾಮ ಈ ಇಳಿಕೆ ಕಂಡುಬಂದಿದೆ.

ಎನ್ನಲಾಗಿದೆ. 2017ರಲ್ಲಿ ಶೇ.3ರಷ್ಟು ಮದ್ಯ ಮಾರಾಟ ಇಳಿಕೆ ಕಂಡು ಬಂದಿದೆ. 2017ರಲ್ಲಿ ಸ್ಥಳೀಯವಾಗಿ ತಯಾರಾದ ವಿದೇಶಿ ಮಾದರಿ ಮದ್ಯದ ಬೇಡಿಕೆ ಶೇ. 2.7ರಷ್ಟು ಇಳಿಕೆಯಾಗಿತ್ತು. 2016ರಲ್ಲಿ ಅದು ಶೇ. 2.2ರಷ್ಟು ಇಳಿಕೆ ಕಂಡಿತ್ತು.

loader