ತಿಂಗಳು ಸಂಬಳ ಎಲ್ಲಾ ಎಣ್ಣೆಗಾಗಿಯೇ ಖರ್ಚು ಮಾಡುತ್ತಿದ್ದಾನೆ. ಕುಡಿಯಲು ಹಣ ಇಲ್ಲದೇ ಇದ್ದಾಗ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಭಿಕ್ಕೆ ಬೇಡುತ್ತಾನೆ. ನಿನ್ನೆ ರಾತ್ರಿ ಟವೆಲ್-ಬನಿಯನ್ ಹಾಕಿಕೊಂಡು ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.
ಪಾವಗಡ(ಮಾ.24): ಶಿಕ್ಷಕ ಸಮೂಹವೇ ತಲೆತಗ್ಗಿಸುವಂತಹ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಕುಮಾರಲಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ ನಾಗೇಂದ್ರಪ್ಪ ಕುಡಿತದ ಚಟಕ್ಕೆ ದಾಸನಾಗಿ ಭಿಕ್ಷೆ ಬೇಡುತ್ತಿದ್ದಾನೆ. ದಿನನಿತ್ಯ ಮದ್ಯಪಾನ ಮಾಡಿಕೊಂಡೇ ಶಾಲೆಗೆ ಬರುವ ಈತ, ನಶೆಯಲ್ಲೇ ಪಾಠ ಮಾಡುತ್ತಾನೆ ಎನ್ನಲಾಗಿದೆ.
ತಿಂಗಳು ಸಂಬಳ ಎಲ್ಲಾ ಎಣ್ಣೆಗಾಗಿಯೇ ಖರ್ಚು ಮಾಡುತ್ತಿದ್ದಾನೆ. ಕುಡಿಯಲು ಹಣ ಇಲ್ಲದೇ ಇದ್ದಾಗ ಮಾರುಕಟ್ಟೆ, ಬಸ್ ನಿಲ್ದಾಣದಲ್ಲಿ ಭಿಕ್ಕೆ ಬೇಡುತ್ತಾನೆ. ನಿನ್ನೆ ರಾತ್ರಿ ಟವೆಲ್-ಬನಿಯನ್ ಹಾಕಿಕೊಂಡು ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.
ಕನಕಲುಬಂಡಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೂ ಇದೇ ಕಾರಣಕ್ಕೆ ಅಮಾನತ್ತಾಗಿದ್ದ. ಈಗ ಹಳೇ ಚಾಳಿಯನ್ನು ಮುಂದುವರಿಸಿ ಮತ್ತೆ ಸಿಕ್ಕಿಬಿದ್ದಿದ್ದಾನೆ.