ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲದಲ್ಲಿ ಕಾಲಿಟ್ಟ ನಾಲ್ಕನೇ ಮನುಷ್ಯ ಎಂಬ ಖ್ಯಾತಿಯ ಆ್ಯಲನ್ ಬೀನ್ ನಿಧನ ಹೊಂದಿದ್ದಾರೆ. ೮೬ ವಯಸ್ಸಿನ ಬೀನ್ ಹೋಸ್ಟನ್ ನ ಮೆತೊಡಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ವಾಷಿಂಗ್ಟನ್ [ಮೇ.27]: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲದಲ್ಲಿ ಕಾಲಿಟ್ಟ ನಾಲ್ಕನೇ ಮನುಷ್ಯ ಎಂಬ ಖ್ಯಾತಿಯ ಆ್ಯಲನ್ ಬೀನ್ ನಿಧನ ಹೊಂದಿದ್ದಾರೆ. 86 ವಯಸ್ಸಿನ ಬೀನ್ ಹೋಸ್ಟನ್ ನ ಮೆತೊಡಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

1969 ರ ಅಪೊಲೋ-12 ಮಿಷನ್ ಸಂದರ್ಭದಲ್ಲಿ ಫ್ಲೈಟ್ ಪೈಲೆಟ್ ಆಗಿ ಆ್ಯಲನ್ ಬೀನ್ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬೀನ್ ಅವರನ್ನು ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ಮನುಷ್ಯ ಎಂದು ಪರಿಗಣಿಸಲಾಗಿದೆ. ತಮ್ಮ ಜೀವಿತಾವಧಿಯಲ್ಲಿ ಒಟ್ಟು ಎರಡು ಬಾರಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದಾರೆ.

Scroll to load tweet…

1975 ರಲ್ಲಿ ನಿವೃತ್ತಿ ಹೊಂದಿದ ಬೀನ್, ನಾಸಾದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬೀನ್ ಅವರ ನಿಧನಕ್ಕೆ ನಾಸಾ ತೀವ್ರ ಸಂತಾಪ ಸೂಚಿಸಿದ್ದು, ಬ್ರಹ್ಮಾಂಡದ ಕೌತುಕಗಳನ್ನು ಬಿಚ್ಚಿಡುವ ಆ್ಯಲನ್ ಬೀನ್ ಕನಸನ್ನು ನನಸು ಮಾಡಲು ನಾಸಾ ಸದಾ ಪ್ರಯತ್ನಿಸುತ್ತದೆ ಎಂದು ತನ್ನ ಸಂತಾಪ ಸೂಚನೆಯಲ್ಲಿ ತಿಳಿಸಿದೆ.