ನವದೆಹಲಿ(ಜು.10): ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಬಂಧನದಿಂದ ಮುಕ್ತಗೊಳಿಸಲು ಕಣಿವೆಯಲ್ಲಿ ಸಂಘಟನೆ ಸಕ್ರೀಯವಾಗಿದೆ ಎಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಐಮಾನ್ ಅಲ್ ಜವಾಹರಿ ಗುಡುಗಿದ್ದಾನೆ.

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಜವಾಹರಿ, ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಮುಜಾಹದೀನ್'ಗಳಿಗೆ ಅಲ್ ಖೈದಾ ಸೂಕ್ತ ತರಬೇತಿ ನೀಡುತ್ತಿದೆ ಎಂದು ಹೇಳಿದ್ದಾನೆ.

ಇದೇ ವೇಳೆ ಭಾರತ ಸರ್ಕಾರ ಮತ್ತು ಭಾರತೀಯ ಸೇನೆಗೆ ಪಂಥಾಹ್ವಾನ ನೀಡಿರುವ ಜವಾಹರಿ, ಕಾಶ್ಮೀರ ಬಿಡದಿದ್ದರೆ ಭಾರತ ಹಿಂದೆಂದೂ ಕಂಡಿರದಷ್ಟು ರಕ್ತಪಾತ ಕಾಣಲಿದೆ ಎಂದು ಎಚ್ಚರಿಸಿದ್ದಾನೆ.

ಇನ್ನು ಜವಾಹರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಳೆದ ಮೇನಲ್ಲಿ ಭಾರತೀಯ ಸೇನೆಯಿಂದ ಹತನಾಗಿದ್ದ ಅಲ್ ಖೈದಾದ ಭಾರತದ ಮುಖ್ಯಸ್ಥ ಜಾಕೀರ್ ಮುಸಾನ ಫೋಟೋ ಇದೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟ ಖಾಫಿರರ ವಿರುದ್ಧದ ಅಂತಾರಾಷ್ಟ್ರೀಯ ಮಟ್ಟದ ಹೋರಾಟದ ಭಾಗ ಎಂದು ಜವಾಹರಿ ಹೇಳಿದ್ದು, ಆಜಾದ್ ಕಾಶ್ಮೀರಕ್ಕಾಗಿ ಸಂಘಟನೆ ರಕ್ತಪಾತ ನಡೆಸಲು ಸರ್ವ ಸನ್ನದ್ಧವಾಗಿದೆ ಎಂದು ಗುಡುಗಿದ್ದಾನೆ.