Asianet Suvarna News Asianet Suvarna News

ಜನವಿರೋಧಿ ಕ್ರಮದ ವಿರುದ್ಧ ಆಕ್ರೋಶ ದಿನ: ಕಾಂಗ್ರೆಸ್

ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವವರೆಗೆ ನಾವು ಒತ್ತಡವನ್ನು ಹೇರುತ್ತೇವೆ. ಯಾರಿಗೂ ಹಾನಿಯನ್ನುಂಟುಮಾಡದೇ ನಮ್ಮ ಆಕ್ರೋಶವನ್ನು ಶಾಂತಿಯುತವಾಗಿ ವ್ಯಕ್ತಪಡಿಸುತ್ತೇವೆ. ನೋಟುಗಳನ್ನು ಅಮಾನ್ಯ ಮಾಡಿರುವ ಸರ್ಕಾರದ ಜನವಿರೋಧಿ ಕ್ರಮದ ವಿರುದ್ಧ ನಾವು ಪ್ರತಿಭಟಿಸುತ್ತೇವೆ, ಎಂದು ಆಝಾದ್ ಹೇಳಿದ್ದಾರೆ.

Akrosh Diwas Is Against Govt Move to Ban Currency Notes Says Congress

ನವದೆಹಲಿ (ನ.26): ದೊಡ್ಡ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವ ಸರ್ಕಾರದ ಜನವಿರೋಧಿ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ‘ಆಕ್ರೋಶ ದಿನ’ವನ್ನು ಆಚರಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ  ಗುಲಾಂ ನಬಿ ಆಝಾದ್ ಹೇಳಿದ್ದಾರೆ.

ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವವರೆಗೆ ನಾವು ಒತ್ತಡವನ್ನು ಹೇರುತ್ತೇವೆ. ಯಾರಿಗೂ ಹಾನಿಯನ್ನುಂಟುಮಾಡದೇ ನಮ್ಮ ಆಕ್ರೋಶವನ್ನು ಶಾಂತಿಯುತವಾಗಿ ವ್ಯಕ್ತಪಡಿಸುತ್ತೇವೆ. ನೋಟುಗಳನ್ನು ಅಮಾನ್ಯ ಮಾಡಿರುವ ಸರ್ಕಾರದ ಜನವಿರೋಧಿ ಕ್ರಮದ ವಿರುದ್ಧ ನಾವು ಪ್ರತಿಭಟಿಸುತ್ತೇವೆ, ಎಂದು ಆಝಾದ್ ಹೇಳಿದ್ದಾರೆ.

ಸರ್ಕಾರದ ಕ್ರಮದಿಂದ ದೇಶದಲ್ಲಿ ಹಿಂದೆಂದೂ ಕಂಡದ ಅರಾಜಕತೆ ಸೃಷ್ಟಿಯಾಗಿದೆ. ದೇಶದ ಆರ್ಥಿಕತೆಯನ್ನು ನಾಶಮಾಡುವ ಯೋಜನೆಯನ್ನು ಸರ್ಕಾರ ಕೈಗೊಂಡಿದೆ, ಎಂದು ಅವರು ಹೇಳಿದ್ದಾರೆ.

ನೋಟು ಅಮಾನ್ಯ ಮಾಡಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಪ್ರತಿಪಕ್ಷಗಳು ನ.28ರಂದು ‘ಆಕ್ರೋಶ ದಿನ’ದ ಹೆಸರಿನಲ್ಲಿ ಭಾರತ ಬಂದ್’ಗೆ ಕರೆ ನೀಡಿವೆ.

Follow Us:
Download App:
  • android
  • ios