ರಾಜ್'ಕೋಟ್'ನ ಸಂಜೆ ಪತ್ರಿಕೆಯೊಂದು 'ಏಪ್ರಿಲ್ ಫೂಲ್' ದಿನದಂದು ಓದುಗರಿಗಾಗಿ ವ್ಯಂಗ ಚಿತ್ರದ ಮೂಲಕ 'ಸರ್ಕಾರ 500 ಹಾಗೂ 1000 ರೂ. ನೋಡುಗಳನ್ನು ನಿಷೇಧಿಸುತ್ತದೆ' ಎಂಬ ಹಾಸ್ಯವನ್ನು ಪ್ರಕಟಿಸಿತ್ತು. ಆದರೆ ಪ್ರಧಾನಿ ಮೋದಿ ಯಾವ ದಿನ ನೋಟ್ ಬ್ಯಾನ್ ಮಾಡಿದರೋ ಅಂದಿನಿಂದ ಈ ಪತ್ರಿಕೆಯ ಸಂಪಾದಕರಿಗೆ ಒಂದರ ಮೇಲೊಂದರಂತೆ ದೂರವಾಣಿ ಕರೆಗಳು ಬರಲಾರಂಭಿಸಿವೆಯಂತೆ.
ಗುಜರಾತ್(ನ.18): ರಾಜ್'ಕೋಟ್'ನ ಸಂಜೆ ಪತ್ರಿಕೆಯೊಂದು 'ಏಪ್ರಿಲ್ ಫೂಲ್' ದಿನದಂದು ಓದುಗರಿಗಾಗಿ ವ್ಯಂಗ ಚಿತ್ರದ ಮೂಲಕ 'ಸರ್ಕಾರ 500 ಹಾಗೂ 1000 ರೂ. ನೋಡುಗಳನ್ನು ನಿಷೇಧಿಸುತ್ತದೆ' ಎಂಬ ಹಾಸ್ಯವನ್ನು ಪ್ರಕಟಿಸಿತ್ತು. ಆದರೆ ಪ್ರಧಾನಿ ಮೋದಿ ಯಾವ ದಿನ ನೋಟ್ ಬ್ಯಾನ್ ಮಾಡಿದರೋ ಅಂದಿನಿಂದ ಈ ಪತ್ರಿಕೆಯ ಸಂಪಾದಕರಿಗೆ ಒಂದರ ಮೇಲೊಂದರಂತೆ ದೂರವಾಣಿ ಕರೆಗಳು ಬರಲಾರಂಭಿಸಿವೆಯಂತೆ.
ಈ ಕುರಿತಾಗಿ ಸಂಜೆ ಪತ್ರಿಕೆ 'ಅಕೀಲಾ' ಪತ್ರಿಕೆಗೆ ಬರುತ್ತಿರುವ ಕರೆಗಳನ್ನು ಸ್ವೀಕರಿಸಿ ಹೈರಾಣಾಗಿರುವ ಸಂಪಾದಕ ತಾವು ಇದನ್ನು ಕೇವಲ ಒಂದು ಹಾಸ್ಯವಾಗಿ ಪ್ರಕಟಿಸಿದ್ದೆವು. ಈ ಕುರಿತಾಗಿ ನಮಗೆ ಯಾವುದೇ ಮಾಹಿತಿ ಇರಲಿಲ್ಲ' ಎನ್ನುತ್ತಿದ್ದಾರೆ. ಏಪ್ರಿಲ್ 1, 2016ರಂದು ಪ್ರಕಟವಾಗಿದ್ದ ಈ ಪ್ರಧಾನಿ ಮೋದಿ 500 ಹಾಗೂ 1000 ರು. ನೋಟ್ ಬ್ಯಾನ್ ಮಾಡಿದ ಕ್ಷಣದಿಂದ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಚಾರವಾಗಿ ಮಾತನಾಡಿರುವ ಪತ್ರಿಕೆಯ ಸಂಪಾದಕ 'ನಾವು ಏಪ್ರಿಲ್ 1, 2016 ರಂದು ಇದನ್ನು ಕೇಲವ ಒಂದು ಹಾಸ್ಯವಾಗಿ ಪ್ರಕಟಿಸಿದ್ದೆವು. ಇದಾಗಿ 6 ತಿಂಗಳ ಬಳಿಕ ಪ್ರಧಾನಿ ನೋಟುಗಳನ್ನು ಬ್ಯಾನ್ ಮಾಡಿರುವುದು ಕಾಕತಾಳೀಯ. ಏಪ್ರಿಲ್ ಫೂಲ್'ನಂದು ಗುಜರಾತ್'ನ ಪತ್ರಿಕೆಗಳು ಇಂತಹ ಹಾಸ್ಯಗಳನ್ನು ಪ್ರಕಟಿಸುವುದು ಸಾಮಾನ್ಯ' ಎಂದಿದ್ದಾರೆ.
