ಸಾರ್ವಜನಿಕ ಹಣವನ್ನು ಈ ರೀತಿ ಅನಾವಶ್ಯಕವಾಗಿ ಅನುತ್ಪಾದಕ ಕೆಲಸಕ್ಕೆ ಬಳಸುವುದು ಸರಿಯಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಲಖನೌ(ಮೇ.20): ಉತ್ತರ ಪ್ರದೇಶದ ಹಿಂದಿನ ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರ, ನಿರುದ್ಯೋಗಿಗಳಿಗೆ 20 ಕೋಟಿ ರೂಪಾಯಿ ಮೊತ್ತದ ಚೆಕ್‌ ವಿತರಿಸಲು 15 ಕೋಟಿ ರುಪಾಯಿ ದುಂದು ವೆಚ್ಚ ಮಾಡಿದೆ ಎಂದು ಸಿಎಜಿ ವರದಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೇರೋಜ್‌'ಗಾರಿ ಭತ್ತಾ ಯೋಜನೆ ಅಡಿಯಲ್ಲಿ 1.26 ಲಕ್ಷ ಫಲಾನುಭವಿಗಳಿಗೆ ಚೆಕ್‌ ವಿತರಣೆಯ ಕಾರ್ಯಕ್ರಮಗಳಲ್ಲಿ ಆಸನ, ತಿಂಡಿ, ಇತರ ಸೌಕರ್ಯಕ್ಕಾಗಿ 8 ಕೋಟಿ ರುಪಾಯಿ ವ್ಯಯಿಸಿದೆ.

ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಬೇಕಿತ್ತಾದರೂ, ಫಲಾನುಭವಿಗಳನ್ನು ಕಾರ್ಯಕ್ರಮ ನಡೆಯುವ ಜಾಗಕ್ಕೆ ಕರೆತರಲು 7 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. 

ಸಾರ್ವಜನಿಕ ಹಣವನ್ನು ಈ ರೀತಿ ಅನಾವಶ್ಯಕವಾಗಿ ಅನುತ್ಪಾದಕ ಕೆಲಸಕ್ಕೆ ಬಳಸುವುದು ಸರಿಯಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.