ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ ಅಖಿಲೇಶ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದಿಂದ ಮುಲಾಯಂ ಸಿಂಗ್ ನಿನ್ನೆ ಉಚ್ಛಾಟಿಸಿದ್ದರು.

ಲಕ್ನೋ (ಡಿ.31): ಉತ್ತರ ಪ್ರದೇಶ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಉಚ್ಛಾಟನೆ ಅಧ್ಯಾಯವು ಇಂದು ಹೊಸ ತಿರುವನ್ನು ಪಡೆದುಕೊಂಡಿದೆ. ಪಕ್ಷದಿಂದ ಹೊರಹಾಕಿದ 24 ಗಂಟೆಯೊಳಗೆ ಅಖಿಲೇಶ್ ಯಾದವ್ ಹಾಗೂ ರಾಮಗೋಪಾಲ್ ಯಾದವ್ ಅವರ ಉಚ್ಛಾಟನೆಯನ್ನು ಪಕ್ಷವು ಹಿಂಪಡೆದಿದೆ.

ಪಕ್ಷದ ವರಿಷ್ಠ ಮುಲಾಯಮ್ ಸಿಂಗ್ ಯಾದವ್ ಆದೇಶದ ಮೇರೆಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ ಅವರ ಉಚ್ಛಾಟನೆ ಆದೇಶವನ್ನು ತಕ್ಷಣದಿಂದ ವಾಪಾಸು ಪಡೆಯಲಾಗಿದೆ ಎಂದು ಸಮಾಜವಾದಿ ಪಕ್ಷದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಹೇಳಿದ್ದಾರೆ.

ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ ಅಖಿಲೇಶ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದಿಂದ ಮುಲಾಯಂ ಸಿಂಗ್ ನಿನ್ನೆ ಉಚ್ಛಾಟಿಸಿದ್ದರು.

ಪಕ್ಷದೊಳಗಿದ್ದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಕೋಮುಶಕ್ತಿಗಳನ್ನು ನಾವು ಒಗ್ಗಟ್ಟಾಗಿ ಎದುಸರಿಲಿದ್ದೇವೆ, ಹಾಗೂ ಮುಂದಿನ ಬಾರಿಯೂ ಸರ್ಕಾರ ರಚಿಸಲಿದ್ದೇವೆ, ಎಂದು ಶಿವಪಾಲ್ ಯಾದವ್ ಸಂದರ್ಭದಲ್ಲಿ ಹೇಳಿದ್ದಾರೆ.