ಆರ್‌ಎಸ್‌ಎಸ್ ನನ್ನ ‘15 ನಿಮಿಷ’ದ ಭಾಷಣ ಸ್ಮರಿಸುತ್ತಿದೆ: ಒವೈಸಿ!
ಅಕ್ಬರುದ್ದೀನ್ ಒವೈಸಿ ಅವರನ್ನು ಕಂಡರೆ ಆರ್‌ಎಸ್‌ಎಸ್‌ಗೆ ಈಗಲೂ ಭಯವಂತೆ| ಅಕ್ಬರುದ್ದೀನ್ ಒವೈಸಿಯ ‘15 ನಿಮಿಷ’ದ ಭಾಷಣ ಸ್ಮರಿಸುತ್ತಿದೆ ಆರ್‌ಎಸ್‌ಎಸ್?| ಮತ್ತೆ ವಿವಾದಾತ್ಮಕ ಹೇಳಿಕೆ ನೆನಪಿಸಿದ ಅಕ್ಬರುದ್ದೀನ್ ಒವೈಸಿ| ಆರ್‌ಎಸ್‌ಎಸ್ ತಮ್ಮ ಭಾಷಣವನ್ನು ಸ್ಮರಿಸುತ್ತಾ ಬೆವರುತ್ತದೆ ಎಂದ ಒವೈಸಿ|
ನಿಜಾಮಾಬಾದ್(ಜು.25): ಆರ್‌ಎಸ್‌ಎಸ್ ನನ್ನ ‘15 ನಿಮಿಷ ಪೊಲೀಸರನ್ನು ಹಿಂಪಡೆಯಿರಿ..’ಹೇಳಿಕೆಯನ್ನು ಸ್ಮರಿಸುತ್ತಿದ್ದು, ನನ್ನ ಹೇಳಿಕೆಯಿಂದ ಈಗಲೂ ನಡುಗುತ್ತಿದೆ ಎಂದು ಎಐಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಹೇಳಿದ್ದಾರೆ.
ನಿಜಾಮಾಬಾದ್’ನಲ್ಲಿ ಮಾತನಾಡಿರುವ ಅಕ್ಬರುದ್ದೀನ್ ಒವೈಸಿ, ಹೆದರುವವರನ್ನು ಕಂಡರೆ ಜನ ಹೆದರಿಸುತ್ತಾರೆ. ಅದರಂತೆ ಹೆದರಿಸುವವರನ್ನು ಕಂಡರೆ ಜನ ಹೆದರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಆರ್‌ಎಸ್‌ಎಸ್ ಈಗಲೂ ತಮ್ಮ 15 ನಿಮಿಷ ಉಲ್ಲೇಖದ ಭಾಷಣ ಕೇಳಿ ಹೆದರುತ್ತದೆ. ತಮ್ಮ ಭಾಷಣವನ್ನು ಸ್ಮರಿಸುತ್ತಾ ಬೆವರುತ್ತದೆ ಎಂದು ಒವೈಸಿ ಪ್ರತಿಪಾದಿಸಿದ್ದಾರೆ.
2012ರಲ್ಲಿ ತೆಲಂಗಾಣದ ನಿರ್ಮಲ್’ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಅಕ್ಬರುದ್ದೀನ್ ಒವೈಸಿ, ಈ ದೇಶದಿಂದ ಕೇವಲ 15 ನಿಮಿಷ ಪೊಲೀಸರನ್ನು ಹಿಂಪಡೆದರೆ ಹಿಂದೂ-ಮುಸ್ಲಿಂರಲ್ಲಿ ಯಾರಿಗೆ ಹೆಚ್ಚು ತಾಕತ್ತು ಇದೆ ಎಂಬುದನ್ನು ತೋರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.