ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರ ಅಕಾಶ್‌ ಅಂಬಾನಿ ಮತ್ತು ವಜ್ರೋದ್ಯಮಿ ರಸೆಲ್‌ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವು ಗೋವಾದಲ್ಲಿ ಶನಿವಾರ ನಡೆದಿದೆ ಎನ್ನಲಾಗಿದೆ.
ಮುಂಬೈ : ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅಕಾಶ್ ಅಂಬಾನಿ ಮತ್ತು ವಜ್ರೋದ್ಯಮಿ ರಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವು ಗೋವಾದಲ್ಲಿ ಶನಿವಾರ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರ ಫ್ಯಾನ್ಸ್ ಪೇಜ್’ಗಳಲ್ಲಿ ಈ ರೀತಿಯ ಚಿತ್ರಗಳು ಹರಿದಾಡುತ್ತಿವೆ. ಇನ್ನು ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ವಿವಾಹದ ದಿನಾಂಕ ನಿಗದಿಯಾಗಿಲ್ಲ.
ಇನ್ನು ವಿವಾಹ ಕೂಡ ಇದೇ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ. ಆಕಾಶ್ ಮತ್ತು ಶ್ಲೋಕಾ ಒಂದೇ ಶಾಲೆಯಲ್ಲಿ ಓದಿದವರು. ಎರಡೂ ಕುಟುಂಬಗಳು ಪರಸ್ಪರ ಪರಿಚಿತ.
