ಬೆಂಗಳೂರು :  ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು  ಎನ್ನುವುದು ನಮ್ಮೆಲ್ಲರ ಆಸೆಯಾಗಿತ್ತು. ಪಕ್ಷಕ್ಕೆ‌ ಬಹುಮತ ಸಿಗದೇ ಇರುವ ಕಾರಣ ಸಿಎಂ‌ ಆಗಲಿಲ್ಲ. ಸಿದ್ದರಾಮಯ್ಯ ವ್ಯಕ್ತಿತ್ವ ಆಕಾಶದೆತ್ತರಕ್ಕೆ ಬೆಳೆದಿದೆ ಎಂದು ಎ.ಕೆ ಸುಬ್ಬಯ್ಯ ಹೇಳಿದ್ದಾರೆ. 

ಬಿಜೆಪಿಗೆ ಸರ್ಕಾರ ರಚಿಸಲು ಬಹುಮತ ಸಿಗಲಿಲ್ಲ. ಇದು‌ ಖುಷಿಯ ವಿಚಾರವಾಗಿದೆ. ಆದರೆ ಮೋದಿ, ಮತ್ತು ಚಡ್ಡಿವಾಲಾ ಕುತಂತ್ರ ಮಾಡಿದರು. ವಜುಭಾಯಿ ವಾಲಾ ಆರ್ ಎಸ್ ಎಸ್ ಎಜೆಂಟ್ ಆಗಿದ್ದು,  ಕುತಂತ್ರದಿಂದ ಸರ್ಕಾರ ರಚನೆ ಮಾಡಲು ಹೊರಟಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. 

ಇನ್ನು ಇದೇ ವೇಳೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ಅವರು ಯಡಿಯೂರಪ್ಪ ಸರ್ಕಾರ ಇದ್ದಿದ್ದರೆ ಗೌರಿ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ ಎಂದಿದ್ದು, ಶೋಭಾ ಕರಂದ್ಲಾಜೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. 

ಇನ್ನು ಜಯಮಾಲ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಬ್ಬಯ್ಯ ಜಯಮಾಲಾಗೆ ನಿಯಮ ಉಲ್ಲಂಘನೆ ಮಾಡಿ ಸಚಿವ ಸ್ಥಾನ ನೀಡಿದ್ದಾರೆ ಎಂದಿದ್ದಾರೆ.