2007 ರ ಅಜ್ಮೀರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ್ ಸೇರಿದಂತೆ ಇಬ್ಬರಿಗೆ ಎನ್ ಐಎ ವಿಶೇಷ ನ್ಯಾಯಾಲಯ ಖುಲಾಸೆ ನೀಡಿದೆ. ದೇವೇಂದ್ರ ಗುಪ್ತಾ, ಭಾವೇಶ್ ಪಟೇಲ್ ಹಾಗೂ ಸುನೀಲ್ ಜೋಷಿ (ಮೃತಪಟ್ಟಿದ್ದಾರೆ) ಈ ಮೂವರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.
ನವದೆಹಲಿ (ಮಾ.08): 2007 ರ ಅಜ್ಮೀರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ್ ಸೇರಿದಂತೆ ಇಬ್ಬರಿಗೆ ಎನ್ ಐಎ ವಿಶೇಷ ನ್ಯಾಯಾಲಯ ಖುಲಾಸೆ ನೀಡಿದೆ. ದೇವೇಂದ್ರ ಗುಪ್ತಾ, ಭಾವೇಶ್ ಪಟೇಲ್ ಹಾಗೂ ಸುನೀಲ್ ಜೋಷಿ (ಮೃತಪಟ್ಟಿದ್ದಾರೆ) ಈ ಮೂವರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.
ಭಾವೇಶ್ ಪಟೇಲ್ ಹಾಗೂ ದೇವೇಂದ್ರ ಗುಪ್ತಾರಿಗೆ 1 ಲಕ್ಷ ಜುಲ್ಮಾನೆಯನ್ನು ವಿಧಿಸಿದ್ದು ಶಿಕ್ಷೆಯ ಪ್ರಮಾಣವನ್ನು ಮಾ.16 ರಂದು ಪ್ರಕಟಿಸಲಿದೆ.
ರಕ್ಷಣಾ ಇಲಾಖೆ ಮತ್ತು ಪ್ರಾಸಿಕ್ಯೂಶನ್ ಸಲ್ಲಿಸಿದ ದಾಖಲೆಗಳ ಪರಿಶೀಲನೆಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ ಎಂದು ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ವಿಚಾರಣೆಯನ್ನು ನ್ಯಾ. ದಿನೇಶ್ ಗುಪ್ತಾ ಮುಂದೂಡಿದ್ದರು. ಪ್ರಕರಣವನ್ನು ರಾಜಸ್ಥಾನದ ಎಟಿಎಸ್ ಗೆ ವಹಿಸಲಾಗಿತ್ತು. ತದನಂತರ ಎನ್ ಐಗೆ ವರ್ಗಾವಣೆ ಮಾಡಲಾಗಿದೆ.
ಕ್ವಾಜಾ ಮೋನುದ್ದೀನ್ ಚಿಷ್ಟಿ ದರ್ಗಾದಲ್ಲಿ 2007. ಅಕ್ಟೋಬರ್ 11 ರಂದು ರಂಜಾನ್ ವೇಳೆ ಬಾಂಬ್ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದು 17 ಮಂದಿ ಗಾಯಗೊಂಡಿದ್ದರು. 149 ಮಂದಿ ಈ ಘಟನೆಗೆ ಸಾಕ್ಷಿಯಾಗಿದ್ದರು.
