ಶಶಿಕಲಾ ಮತ್ತು ಅಜಿತ್ ದಿಢೀರ್ ಭೇಟಿ ಹಿನ್ನೆಲೆಯಲ್ಲಿ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಅಜಿತ್ ಜಯಲಲಿತಾರಿಗೆ ಆಪ್ತರಾಗಿದ್ದು, ಮುಂದಿನ ಉತ್ತರಾಧಿಕಾರಿ ಆದರೂ ಆಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಚೆನ್ನೈ(ಡಿ.27): ಬಲ್ಗೇರಿಯಾದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ತಮಿಳು ನಟ ಅಜಿತ್ ಕ್ರಿಸ್ ಮಸ್ ಆಚರಣೆಗಾಗಿ ಚೆನ್ನೈಗೆ ಆಗಮಿಸಿದ್ದಾರೆ. ಈ ಮಧ್ಯೆ ನಿನ್ನೆ ಪೋಯಸ್ ಗಾರ್ಡನ್ ನಿವಾಸದಲ್ಲಿ ಜಯಲಲಿತಾ ಆತ್ಮ ಗೆಳತಿ ಶಶಿಕಲಾರನ್ನ ಭೇಟಿ ಮಾಡಿದ್ದಾರೆಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಶಿಕಲಾ ಮತ್ತು ಅಜಿತ್ ದಿಢೀರ್ ಭೇಟಿ ಹಿನ್ನೆಲೆಯಲ್ಲಿ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಅಜಿತ್ ಜಯಲಲಿತಾರಿಗೆ ಆಪ್ತರಾಗಿದ್ದು, ಮುಂದಿನ ಉತ್ತರಾಧಿಕಾರಿ ಆದರೂ ಆಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಎಂಥೆಂಥವರಿಗೂ ಜಯಲಲಿತಾರನ್ನ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅಜಿತ್ ಒಬ್ಬರೇ ಒಬ್ಬರು ಅಪೋಲೋ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಬಂದಿದ್ದನ್ನ ಇಲ್ಲಿ ಸ್ಮರಿಸಬಹುದು.