ಮುಂಬೈ[ನ. 24]  ಬಿಜೆಪಿ ಜತೆ ಎನ್ ಸಿಪಿ ದೋಸ್ತಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್  ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

ನಾನು ಎನ್ ಸಿಪಿ ಬಿಟ್ಟಿಲ್ಲ. ಎನ್ ಸಿಪಿಯಲ್ಲೇ ಇದ್ದೇನೆ. ಶರದ್ ಪವಾರ್ ಅವರೇ ನನ್ನ ನಾಯಕ. ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸ್ಥಿರ ಸರ್ಕಾರ ನೀಡಲಿದೆ  ಎಂದು ಹೇಳಿರುವ ಅಜಿತ್ ಪವಾರ್ ವಿರುದ್ಧ ಶರದ್ ಕೆಂಡಾಮಂಡಲವಾಗಿದ್ದಾರೆ.

ಅಜಿತ್ ಪವಾರ್ ಮೇಲೆ ಭ್ರಷ್ಟಾಚಾರ ತನಿಖೆಗೆ ಆದೇಶ ಮಾಡಿದ್ದು ಇದೇ ಫಡ್ನವೀಸ್

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಕೂಟ ಸರ್ಕಾರ ರಚಿಸುವ ಒಮ್ಮತದ ನಿರ್ಧಾರ ಕೈಗೊಂಡಿವೆ. ಅಜಿತ್ ಪವಾರ್ ಹೇಳಿಕೆ ಜನರನ್ನು ಮಿಸ್ ಲೀಡ್ ಮಾಡುತ್ತಿದೆ ಎಂದು ದೂರಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಶರದ್ ಅಜಿತ್ ಪವಾರ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗೂ ಮುನ್ನ ಟ್ವಿಟ್ ಮಾಡಿದ್ದ ಅಜಿತ್ ಪವಾರ್, ನಾನು ಈಗಲೂ ಎನ್ ಸಿಪಿಯಲ್ಲಿಯೇ ಇದ್ದೇನೆ. ಮುಂದೆಯೂ ಕೂಡಾ ಎನ್ ಸಿಪಿಯಲ್ಲಿಯೇ ಇರುತ್ತೇನೆ. ಶರದ್ ಪವಾರ್ ನಮ್ಮ ನಾಯಕರು ಎಂದು ಹೇಳಿದ್ದರು. ಜತೆಗೆ ಖಾತೆಯಲ್ಲಿ ಎಲ್ ಸಿಪಿ ಮುಖಂಡ ಎಂಬುದನ್ನು ಇರಿಸಿಕೊಂಡಿದ್ದರು.