ಭಾರತದ ಟೆಸ್ಟ್ ಕ್ರಿಕೆಟರ್ ಅಜಿಂಕ್ಯಾ ರಹಾನೆ ತಂದೆ  ಮಧುಕರ್ ಬಾಬು ರಾವ್ ರಹಾನೆ ಅವರನ್ನು ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ನವದೆಹಲಿ (ಡಿ.15): ಭಾರತದ ಟೆಸ್ಟ್ ಕ್ರಿಕೆಟರ್ ಅಜಿಂಕ್ಯಾ ರಹಾನೆ ತಂದೆ ಮಧುಕರ್ ಬಾಬು ರಾವ್ ರಹಾನೆ ಅವರನ್ನು ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯೋರ್ವರಿಗೆ ಅವರ ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಹಿತಿಗಳ ಪ್ರಕಾರವಾಗಿ ಕೊಲ್ಲಾಪುರ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಹ್ಯೂಂಡೈ ಐ 20 ಕಾರಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ – 4ರಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಸ್ಥಳದಲ್ಲಿ ಜನರು ಸೇರಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬಳಿಕ ರಹಾನೆ ಅವರ ತಂದೆಯನ್ನು ಪೊಲೀಸರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.