ಮೊದಲಾರ್ಧದ ಅಂತ್ಯಕ್ಕೆ ಭಾರತ 13-18 ಅಂಕಗಳಿಂದ ಐದು ಅಂಕಗಳ ಹಿನ್ನಡೆ ಅನುಭವಿಸಿದರೂ ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮುನ್ನಡೆ ಪಡೆಯಿತು. ಅಜಯ್​ ಠಾಕೂರ್​ ಉತ್ತಮ ರೈಡ್​ಗಳ ಮೂಲಕ ಇರಾನ್​ ಪಡೆಯನ್ನು ಕಟ್ಟಿ ಹಾಕಿದರು.

ಅಹಮದಬಾದ್​ನಲ್ಲಿ ನಡೆದ ಕಬಡ್ಡಿ ವಿಶ್ವಕಪ್ ಫೈನಲ್​ನಲ್ಲಿ ಇರಾನ್​​ ವಿರುದ್ಧ ಭಾರತ 38-29 ಅಂಕಗಳಿಂದ ಭರ್ಜರಿ ಜಯ ದಾಖಲಿಸುವ ಮೂಲಕ ಮೂರನೇ ಸಲ ವಿಶ್ವಕಪ್​ ಎತ್ತಿಹಿಡಿಯಿತು.

ಕಬಡ್ಡಿ ವಿಶ್ವಕಪ್ ಆರಂಭದಲ್ಲೇ ಉಭಯ ತಂಡಗಳು ರಕ್ಷಣಾತ್ಮಕ ಆಟದಿಂದ ಗಮನಸೆಳೆಯುವುದರ ಜೊತೆ ರೈಡಿಂಗ್​ಕ್ಕಿಂತ ಹೆಚ್ಚು ಡಿಫೆನ್ಸ್​ಗೆ ಹೆಚ್ಚಿನ ಒತ್ತು ನೀಡಿದವು. ಮಿರಾಜ್ ಶೇಕ್​ ಉತ್ತಮ ರೈಡಿಂಗ್​ನಿಂದಾಗಿ ಇರಾನ್​ ಆರಂಭದಲ್ಲೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು.

ಮೊದಲಾರ್ಧದ ಅಂತ್ಯಕ್ಕೆ ಭಾರತ 13-18 ಅಂಕಗಳಿಂದ ಐದು ಅಂಕಗಳ ಹಿನ್ನಡೆ ಅನುಭವಿಸಿದರೂ ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮುನ್ನಡೆ ಪಡೆಯಿತು. ಅಜಯ್​ ಠಾಕೂರ್​ ಉತ್ತಮ ರೈಡ್​ಗಳ ಮೂಲಕ ಇರಾನ್​ ಪಡೆಯನ್ನು ಕಟ್ಟಿ ಹಾಕಿದರು.

ಅಂತಿಮವಾಗಿ ಭಾರತ 38-29 ಅಂಕಗಳಿಂದ ಜಯ ದಾಖಲಿಸಿತು. ಮೂರನೇ ಸಲ ಭಾರತ ವಿಶ್ವಕಪ್​ ಎತ್ತಿಹಿಡಿಯುವಲ್ಲಿ ಸಫಲವಾಯಿತು. ಉತ್ತಮ ಆಟ ಪ್ರದರ್ಶಿಸಿದ ಅಜಯ್ ಠಾಕೂರ್​ ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಟ್ರೋಫಿ ಎತ್ತಿಹಿಡಿದ ಅನುಪ್​ ಕುಮಾರ್​ ಪಡೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿತು.

ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ: ಅಜಯ್ ಠಾಕೂರ್​