ಗ್ರಾಮದ ಹೊಲದಲ್ಲಿ ವಾಸವಾಗಿರುವ ನಗ್ನ ಮಾಲಾಧಾರಿಗಳು ಕಳೆದ 15 ದಿನಗಳಿಂದ ಪೂಜೆಯಲ್ಲಿ ನಿರತರಾಗಿದ್ದಾರೆ. ಈ ವಿಚಿತ್ರ ಬೆಳವಣಿಗೆಯಿಂದ ಗ್ರಾಮದಲ್ಲಿ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡಲು ಮುಜುಗರ ಪಡುವಂತಾಗಿದೆ.

ಧಾರಾವಾಡ(ಡಿ. 15): ಜನವರಿಯಲ್ಲಿ ಸಂಕ್ರಾಂತಿ ಸಮೀಪಿಸಿತೆಂದರೆ ಅಯ್ಯಪ್ಪ ಮಾಲಾಧಾರಿಗಳು ಎಲ್ಲೆಡೆ ಕಂಡು ಬರುತ್ತಾರೆ. ಅದ್ರಲ್ಲೂ ಕಪ್ಪು ವಸ್ತ್ರಗಳನ್ನು ಧರಿಸಿ 40 ದಿನಗಳ ಕಾಲ ವಿಶೇಷ ವ್ರತ ಆಚರಣೆಗೆ ಮಾಡುವುದು ಸಾಮಾನ್ಯ. ಮಹಿಳೆಯರು, ಮಕ್ಕಳು ಸೇರಿದಂತೆ ಸಾಂಸಾರಿಕ ಜಂಜಾಟದಿಂದ ದೂರ ಸರಿದು ವ್ರತ ಆಚರಣೆ ಮಾಡ್ತಾರೆ. ಆದ್ರೆ, ಅಯ್ಯಪ್ಪ ಮಾಲಾಧಾರಿಗಳು ನಾಗ ಸಾಧುಗಳಂತೆ ನಗ್ನರಾಗಿ ಪೂಜೆ ಮಾಡುವುದನ್ನು ನೋಡಿದ್ದೀರಾ? ಹೌದು. ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ನಾಲ್ಕು ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ನಗ್ನರಾಗಿ ವ್ರತ ಆಚರಣೆಯಲ್ಲಿ ತಲ್ಲೀನರಾಗಿದ್ದಾರೆ. ಇಂಥದೊಂದು ಬೆಳವಣಿಗೆಯಿಂದ ಸುತ್ತಲ ಗ್ರಾಮದ ಜನರು ಭಯಭೀತಗೊಂಡಿದ್ದಾರೆ. ಗ್ರಾಮದ ಹೊಲದಲ್ಲಿ ವಾಸವಾಗಿರುವ ನಗ್ನ ಮಾಲಾಧಾರಿಗಳು ಕಳೆದ 15 ದಿನಗಳಿಂದ ಪೂಜೆಯಲ್ಲಿ ನಿರತರಾಗಿದ್ದಾರೆ. ಈ ವಿಚಿತ್ರ ಬೆಳವಣಿಗೆಯಿಂದ ಗ್ರಾಮದಲ್ಲಿ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡಲು ಮುಜುಗರ ಪಡುವಂತಾಗಿದೆ. ಈ ಬಗ್ಗೆ ಮಾಲಾಧಾರಿಗಳಿಗೆ ಕೇಳಿದರೆ, ಇದು ಅತ್ಯಂತ ಕಠಿಣ ವ್ರತ. ಇದನ್ನ ಮಾಡುವುದರಿಂದ ಅಂದುಕೊಂಡದ್ದು ಸಿದ್ಧಿಸುತ್ತೆ ಎಂದನ್ನುತ್ತಾರೆ.