ಮೂಲತ: ಮಂಗಳೂರಿನ ಕೌಡೂರುನವರಾಗಿರುವ ಕೃಷ್ಣರಾಜ್ ಭಾರತೀಯ ಸೇನೆಯಲ್ಲಿ ಜೀವಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿ ಬಳಿಕ ಮುಂಬೈಯಲ್ಲಿ ನೆಲೆಸಿದ್ದರು.

ಮುಂಬೈ (ಮಾ.18): ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ಇಂದು ಮುಂಬೈಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತ: ಮಂಗಳೂರಿನ ಕೌಡೂರುನವರಾಗಿರುವ ಕೃಷ್ಣರಾಜ್ ಭಾರತೀಯ ಸೇನೆಯಲ್ಲಿ ಜೀವಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿ ಬಳಿಕ ಮುಂಬೈಯಲ್ಲಿ ನೆಲೆಸಿದ್ದರು.

ಅವರು ಪತ್ನಿ ಬೃಂದಾ, ಪುತ್ರ ಆದಿತ್ಯ ಹಾಗೂ ಪುತ್ರಿ ಐಶ್ವರ್ಯ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಾಂಟಾಕ್ರೂಝ್’ನಲ್ಲಿರುವ ಪವನ್’ಹಂಸ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.