ಏರ್‌'ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆದಿರುವುದು ಬಹುತೇಕ ಗ್ರಾಹಕರಿಗೆ ಗೊತ್ತಿಲ್ಲ. ಗ್ರಾಹಕರು ನೀಡಿದ್ದ ದೂರನ್ನು ಆಧರಿಸಿ, ಯುಐಡಿಎಐ ಕಂಪನಿಯ ಇ ಕೆವೈಸಿ ಲೈಸೆನ್ಸ್ ರದ್ದು ಗೊಳಿಸಿದೆ.

ನವದೆಹಲಿ(ಡಿ.17): ಭಾರ್ತಿ ಏರ್‌'ಟೆಲ್ ಮತ್ತು ಏರ್‌'ಟೆಲ್ ಪೇಮೆಂಟ್ ಬಾಂಕ್ ಇ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪ್ರಕ್ರಿಯೆಯ ಮೂಲಕ ಆಧಾರ್ ಆಧರಿತ ಸಿಮ್ ಪರಿಶೀಲನೆಗೆ ಮಾಡುವುದಕ್ಕೆ ಯುಐಡಿಎಐ ತಾತ್ಕಾಲಿಕ ನಿಷೇಧ ಹೇರಿದೆ.

ಇತ್ತೀಚಿನ ದಿನಗಳಲ್ಲಿ ಏರ್‌'ಟೆಲ್, ಮೊಬೈಲ್ ಸಿಮ್‌'ಗೆ ಆಧಾರ್ ಜೋಡಣೆ ವೇಳೆ, ಗ್ರಾಹಕರಿಗೆ ಗೊತ್ತಿಲ್ಲದೆ ಅವರ ಹೆಸರಿನಲ್ಲಿ ಏರ್‌'ಟೆಲ್ ಪೇಮೆಂಟ್ ಬ್ಯಾಂಕ್‌'ನಲ್ಲಿ ಖಾತೆ ತೆರೆದಿತ್ತು. ಬಳಿಕ ಅವರ ಎಲ್‌ಪಿಜಿ ಸಬ್ಸಿಡಿಯನ್ನು ಪೇಮೆಂಟ್ ಬ್ಯಾಂಕ್ ಖಾತೆಗೆ ಜಮೆ ಮಾಡಿತ್ತು.

23 ಲಕ್ಷ ಗ್ರಾಹಕರಿಂದ ಏರ್‌'ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಎಲ್‌'ಪಿಜಿ ಸಬ್ಸಿಡಿಯ 47 ಕೋಟಿ ರು. ಹಣ ಸಂದಾಯವಾಗಿದೆ. ಆದರೆ, ಏರ್‌'ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆದಿರುವುದು ಬಹುತೇಕ ಗ್ರಾಹಕರಿಗೆ ಗೊತ್ತಿಲ್ಲ. ಗ್ರಾಹಕರು ನೀಡಿದ್ದ ದೂರನ್ನು ಆಧರಿಸಿ, ಯುಐಡಿಎಐ ಕಂಪನಿಯ ಇ ಕೆವೈಸಿ ಲೈಸೆನ್ಸ್ ರದ್ದು ಗೊಳಿಸಿದೆ. ಈ ಆದೇಶದಿಂದಾಗಿ ಏರ್‌'ಟೆಲ್ ಇಲೆಕ್ಟ್ರಾನಿಕ್ ವೆರಿಫಿಕೇಷನ್ ಅಥವಾ ಮೊಬೈಲ್ ಸಿಮ್‌'ಗಳನ್ನು ಆಧಾರ್ ನಂಬರ್ ಜೊತೆ ಜೋಡಣೆ ನಡೆಸುವಂತಿಲ್ಲ. ಅಲ್ಲದೇ ಏರ್‌'ಟೆಲ್ ಪೇಮೆಂಟ್ ಬ್ಯಾಂಕ್ ಇ.ಕೆ.ವೈ.ಸಿ. ಪಡೆದು ಹೊಸ ಬ್ಯಾಂಕ್ ಅಕೌಂಟ್‌'ಗಳನ್ನು ಆರಂಭಿಸುವಂತಿಲ್ಲ.