ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಮೊದಲ ಸ್ಥಾನ ಪಡೆದ ಸಿಲಿಕಾನ್ ಸಿಟಿ ಬೆಂಗಳೂರು ದೆಹಲಿ ರೂಪ ಪಡೆದುಕೊಳ್ಳುತ್ತಿದೆ.

ಬೆಂಗಳೂರು (ಸೆ.01): ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಮೊದಲ ಸ್ಥಾನ ಪಡೆದ ಸಿಲಿಕಾನ್ ಸಿಟಿ ಬೆಂಗಳೂರು ದೆಹಲಿ ರೂಪ ಪಡೆದುಕೊಳ್ಳುತ್ತಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿಯೂ ವಾಯುಮಾಲಿನ್ಯದ ಮಟ್ಟ ಏರಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿಮೀರಿದ್ದು, ಜನರ ಜೀವಕ್ಕೆ ಕುತ್ತು ಬಂದಿದೆ. ಒಂದು ದಶಕದಲ್ಲಿ 40ಲಕ್ಷ ವಾಹನಗಳು ಬೆಂಗಳೂರಿನಲ್ಲಿ ಹೆಚ್ಚಳವಾಗಿದ್ದು, 2021-22ರವೇಳೆಗೆ ಒಂದೂ ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿಯಲಿವೆ..1980ರಲ್ಲಿ 1.68ಲಕ್ಷ ವಾಹನಗಳು ಬೆಂಗಳೂರಿನ ನಗರದಲ್ಲಿದ್ವು , ಆದರೆ ಪ್ರಸ್ತುತ 61 ಲಕ್ಷ ವಾಹನಗಳು ರಾಜಧಾನಿಯಲ್ಲಿ ಇವೆ. ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 40ಲಕ್ಷ ವಾಹನಗಳು ಹೆಚ್ಚಳವಾಗಿದ್ದು ವಾಯು ಮಾಲಿನ್ಯ ಮಿತಿ ಮೀರಿದೆ.

ಯಾವ ಏರಿಯಾದಲ್ಲಿ ಎಷ್ಟು ವಾಯುಮಾಲಿನ್ಯ?

ವೈಟ್ ಫೀಲ್ಡ್ ಪ್ರದೇಶವೊಂದರಲ್ಲೇ 2005-05 ಪ್ರತಿ ಘನಮೀಟರ್ ಗೆ ಶೇ.91.8 ಮೈಕ್ರೋ ಗ್ರಾಂನಷ್ಟಿದ್ದ RSPM ಪ್ರಮಾಣ 2015-16ರಲ್ಲಿ ಶೇ.105ಕ್ಕೆ ಏರಿತ್ತು. ಪ್ರಸ್ತುತ ಮಾಲಿನ್ಯ ಪ್ರಮಾಣ ಶೇ.189ರಷ್ಟು ಇದೆ. ಇನ್ನೂ ಯಲಹಂಕ ಪ್ರದೇಶದಲ್ಲೂ ಸಹ 2005ರಲ್ಲಿ ಶೇ.57.6ರಷ್ಟಿದ್ದ, RSPM, ಪ್ರಸ್ತುತ 109ಕ್ಕೆ ತಲುಪಿದೆ. ಇದೇ ರೀತಿಯ ಪ್ರಮಾಣ ಮುಂದುವರಿದರೆ ಐದಾರು ವರ್ಷದಲ್ಲಿ ದೆಹಲಿಯನ್ನೂ ಮೀರಿಸುವಂತಹ ವಾಯುಮಾಲಿನ್ಯ ಬೆಂಗಳೂರಿನಲ್ಲೂ ಕಾಣಿಸಿಕೊಳ್ಳಬಹುದು.

ನಗರದಲ್ಲಿ ಎಗ್ಗಿಲ್ಲದೆ ವ್ಯಾಪಿಸುತ್ತಿರುವ ವಾಯುಮಾಲಿನ್ಯದ ಪ್ರಮಾಣ ಶೇ.57 ರಷ್ಟು ಹೆಚ್ಚಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ಪೈಕಿ ವಾಯುಮಾಲಿನ್ಯ ಹೆಚ್ಚಳದಲ್ಲಿ ಬೆಂಗಳೂರು (140 ಮೈಕ್ರೋಗ್ರಾಂ ಪರ್ ಕ್ಯೂಬಿಕ್ ಮೀಟರ್) ಮೊದಲ ಸ್ಥಾನದಲ್ಲಿದ್ದರೆ, ವಿಜಯವಾಡ (100), ಹೈದರಾಬಾದ್ (98), ಚೆನ್ನೈ (59), ಕೊಯಮತ್ತೂರು (48) ಮಧುರೈ (45) ನಂತರದ ಸ್ನಾನ ಪಡೆದುಕೊಂಡಿವೆ. ಇನ್ನು ನಗರದೊಳಕ್ಕೆ ಬಂದರೆ ವೈಟ್ ಫೀಲ್ಡ್ ಅತೀ ಹೆಚ್ಚು ವಾಯುಮಾಲಿನ್ಯ ಹೊಂದಿದೆ. ನಂತರ ಆಮ್ಕೋ ಬ್ಯಾಟರೀಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ವಿಕ್ಟೋರಿಯಾ ರಸ್ತೆಯ ಡಿಟಿಡಿಸಿ ಹೌಸ್ ಪಡೆದುಕೊಂಡಿವೆ. ಕೊನೆಯ ಸ್ಥಾನದಲ್ಲಿ ಅಂದರೆ ಅತಿ ಕಡಿಮೆ ಮಾಲಿನ್ಯ ಹೊಂದಿರುವ ಪ್ರದೇಶದಲ್ಲಿ ಬಸವೇಶ್ವರನಗರ, ದೊಮ್ಮಲೂರು ಸಮಾನ ಸ್ಥಾನ ಪಡೆದಿವೆ.

ಮನೆಯೊಳಗಿದ್ದುಕೊಂಡು ಕೆಟ್ಟ ಗಾಳಿ ಸೇವಿಸಿ ಸತ್ತವರ ಸಂಖ್ಯೆ ಶೇ. 4.3 ರಷ್ಟಿದ್ದರೆ, ಮನೆಯ ಹೊರಗಿದ್ದು ಸತ್ತವರ ಸಂಖ್ಯೆ 3.7 ರಷ್ಟಿದೆ. ಹೆಚ್ಚುತ್ತಿರುವ ಮಾಲಿನ್ಯದಿಂದ ಕ್ಯಾನ್ಸರ್, ಪಾಶ್ರ್ವವಾಯು, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಬಾಧಿಸುತ್ತವೆ. ಈ ಕಾಯಿಲೆಗಳ ನಿಯಂತ್ರಣಕ್ಕೆ ಹಣ್ಣು, ತರಕಾರಿ, ಬೆಣ್ಣೆ, ಮೊಸರು, ಮೀನು, ಉಪ್ಪಿನಕಾಯಿ, ವೈನ್ ಸೇವಿಸಬೇಕು. ಎಣ್ಣೆ ವಿಧದಲ್ಲಿ ಆಲೀವ್ ಎಣ್ಣೆ, ಸಫೋಲಾ ಎಣ್ಣೆ, ತೆಂಗಿನ ಎಣ್ಣೆ ಸೇವಿಸಬಹುದು ಎಂದು ವರದಿ ತಿಳಿಸಿದೆ.