ನವದೆಹಲಿ[ಸೆ.7]  ಸುರಕ್ಷತಾ ವೈಫಲ್ಯದಿಂದ 136 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್​ ಇಂಡಿಯಾ ವಿಮಾನವೊಂದು ಮತ್ತೊಂದು ರನ್​ವೇಯಲ್ಲಿ ಇಳಿದು ಕೆಲ ಸಮಯ ಆತಂಕ ಸೃಷ್ಟಿ ಮಾಡಿತ್ತು.

ತಿರುವನಂತಪುರದಿಂದ ಮಾಲ್ಡೀವ್ಸ್​ಗೆ ಹೊರಟ ಎ.320 ನೀಯೊ ವಿಮಾನ ನಿರ್ಮಾಣ ಮಾಲ್ಡೀವ್ಸ್ ನ  ನಿರ್ಮಾಣ ಹಂತದ ರನ್​ವೇನಲ್ಲಿ ವಿಮಾನ ಲ್ಯಾಂಡ್​ ಮಾಡಲು ಫೈಲಟ್ ಯಶಸ್ವಿಯಾಗಿದ್ದು ಅವಘಡ ತಪ್ಪಿಸಿದ್ದಾರೆ.

ಕಳೆದ ಆಗಸ್ಟ್​ನಲ್ಲಿ ಸೌದಿ ಅರೇಬಿಯಾದ ರಿಯಾದ್ನಲ್ಲಿ ರನ್​ವೇನಲ್ಲಿ ​ಭಾರತದ ವಿಮಾನ ತೊಂದರೆಗೆ ಒಳಗಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದ ವೇಳೆಯೂ ವಿಮಾನ ತೊಂದರೆಗೆ ಒಳಗಾಗಿದ್ದು ದೊಡ್ಡ ಸುದ್ದಿಯಾಗಿತ್ತು.