ಹೊಸ ವರ್ಷದ ಯೋಜನೆಯ ಅಂಗವಾಗಿ ಒಮ್ಮುಖವಾಗಿ ಬೆಂಗಳೂರು-ಹೈದರಾಬಾದ್ ನಡುವೆ 849 ರೂಪಾಯಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ.

ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಹೊಸ ವರ್ಷದ ಅಂಗವಾಗಿ ಪ್ರಯಾಣಿಕ ಸ್ನೇಹಿ ಮಿತವ್ಯಯಿ ಶುಲ್ಕದ ಟಿಕೆಟ್ ಆಫರ್ ಘೋಷಿಸಿದೆ. ಹೊಸ ವರ್ಷದ ಯೋಜನೆಯ ಅಂಗವಾಗಿ ಒಮ್ಮುಖವಾಗಿ ಬೆಂಗಳೂರು-ಹೈದರಾಬಾದ್ ನಡುವೆ 849 ರೂಪಾಯಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಸೆಂಬರ್ 31, 2016ರೊಳಗೆ ನೀವು ಟಿಕೆಟ್ ಬುಕ್ ಮಾಡಿದರೆ ಜನವರಿ 15 ರಿಂದ ಏಪ್ರಿಲ್ 30ರೊಳಗೆ ಪ್ರಯಾಣ ಮಾಡಬಹುದಾಗಿದೆ. ಚೆನ್ನೈ-ಕೊಯಿಂಬತ್ತೂರ್, ಬೆಂಗಳೂರು-ಹೈದರಾಬಾದ್ ನಡುವೆ 849 ರೂಪಾಯಿಗಳಲ್ಲಿ ಪ್ರಯಾಣಿಸಬಹುದೆಂದು ಏರ್'ಲೈನ್ಸ್ ತನ್ನ ವೆಬ್'ಸೈಟ್'ನ ಪ್ರಕಟನೆಯಲ್ಲಿ ತಿಳಿಸಿದೆ.

ಇದಷ್ಟೇ ಅಲ್ಲದೇ ಬೆಂಗಳೂರು-ಚೆನ್ನೈ ನಡುವೆ ರೂ.1,199; ಮುಂಬೈ-ಗೋವಾ ರೂ.1,499; ಮುಂಬೈ-ಬೆಂಗಳೂರು 1,599 ರೂಗಳಲ್ಲಿ ಪ್ರಯಾಣಿಸಬಹುದೆಂದು ಏರ್ ಇಂಡಿಯಾ ತಿಳಿಸಿದೆ.

ಮುಂಬರುವ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಸ್ಪರ್ಧಾತ್ಮಕ ದರದಲ್ಲಿ ಪ್ರಯಾಣಿಕರಿಗೆ ಆಫರ್'ಗಳನ್ನು ನೀಡುತ್ತಿವೆ.