ಸುಕೋಯ್-30 ಎಂಕೆಐ ಯುದ್ಧ ವಿಮಾನ ಅಸ್ಸಾಂನ ತೇಜ್ಪುರದಲ್ಲಿ ರಾಡಾರ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.

ನವದೆಹಲಿ (ಮೇ.23): ಸುಕೋಯ್-30 ಎಂಕೆಐ ಯುದ್ಧ ವಿಮಾನ ಅಸ್ಸಾಂನ ತೇಜ್ಪುರದಲ್ಲಿ ರಾಡಾರ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಸ್ಸಾಂನ ತೇಜಪುರದಲ್ಲಿ ಎಂದಿನಂತೆ ತರಬೇತಿ ನೀಡುತ್ತಿರುವಾಗ ರಾಡಾರ್ ಸಂಪರ್ಕ ಕಡಿದು ಹೋಗಿ ನಾಪತ್ತೆಯಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್’ಗಳಿದ್ದರು ಎಂದು ಐಎಎಫ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬೆಳಿಗ್ಗೆ ಸುಮಾರು 9.30 ರ ಸುಮಾರಿಗೆ ಅರುಣಾಚಲ ಪ್ರದೇಶದ ದೌಲಸಾಂಗ್ ಪ್ರದೇಶದಿಂದ ವಿಮಾನ ನಾಪತ್ತಯಾಗಿತ್ತು. 11.30 ಸುಮಾರಿಗೆ ಅಸ್ಸಾಂನ ತೇಜ್ಪುರದಲ್ಲಿ ಸಂಪರ್ಕಕ್ಕೆ ಬಂದಿತ್ತು. ಇದು ಚೀನಾ ಗಡಿಯಿಂದ 172 ಕಿಮೀ ದೂರದಲ್ಲಿದೆ. ಇದುವರೆಗೂ ವಿಮಾನ ಪತ್ತೆಯಾಗದಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಸಾಂದರ್ಭಿಕ ಚಿತ್ರ