ನವದೆಹಲಿ(ಆ.01): ಪಬ್ ಜೀ, ಬ್ಲೂವೇಲ್ ಗೇಮ್’ಗಳಲ್ಲಿ ಮುಳುಗಿರುವ ಯುವ ಸಮುದಾಯವನ್ನು ತನ್ನತ್ತ ಸೇಳೆಯಲು ಭಾರತೀಯ ವಾಯುಸೇನೆ ವಿನೂತನ ಗೇಮ್’ವೊಂದನ್ನು ಪರಿಚಯಿಸಿದೆ.

'Indian Air Force: A Cut Above'  ಎಂಬ ಹೆಸರಿನ ವಿನೂತನ ಗೇಮ್ ಅನ್ನು ನವದೆಹಲಿಯಲ್ಲಿ ನಡೆದ ವಿಶೇಷ ಕರ್ಯಕ್ರಮದಲ್ಲಿ ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವಾ ಬಿಡುಗಡೆ ಮಾಡಿದರು. ಪ್ರಸ್ತುತ ಬಿಡುಗಡೆಯಾಗಿರುವ

ಗೇಮ್ ಆನ್‌’ಲೈನ್‌’ನಲ್ಲಿ ಸಿಂಗಲ್ ಪ್ಲೇಯರ್ ಆಪ್ಶನ್ ಇದ್ದು, ವಾಯುಪಡೆ ದಿನಾಚಾರಣೆಯಂದು ಬಿಡುಗಡೆಯಾಗಲಿರುವ ಎರಡನೇ ಹಂತದಲ್ಲಿ  ಮಲ್ಟಿ ಪ್ಲೇಯರ್ ಆಪ್ಶನ್ ಇರುವ 3D ಏರ್ ಕಾಂಬ್ಯಾಟ್ ಗೇಮ್’ನ್ನು ಬಿಡುಗಡೆ ಮಾಡಲಾಗುವುದು.

ಈ ಗೇಮ್ ಆಂಡ್ರಾಯ್ಡ್ ಮತ್ತು ಐಓಎಸ್'ಗಳಲ್ಲಿ ಲಭ್ಯವಿದ್ದು, ಪ್ಲೇಸ್ಟೋರ್’ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೇಮ್’ನ ಮೂಲಕ ಭಾರತೀಯ ವಾಯುಪಡೆಯ ಕುರಿತು ಮಾಹಿತಿಯನ್ನು ಯುವಜನತೆಯೊಂದಿಗೆ ಹಂಚಿಕೊಳ್ಳುವುದು ವಾಯುಪಡೆಯ ಉದ್ದೇಶವಾಗಿದೆ.

ವಾಯುಪಡೆಯ ಫೈಟರ್ ಜೆಟ್’ಗಳು, ಹೆಲಿಕಾಪ್ಟರ್, ಏರ್ ಡಿಫೆನ್ಸ್ ಮತ್ತು ಟ್ರಾನ್ಸಪೋರ್ಟ್ ಏರ್’ಕ್ರಾಫ್ಟ್‌ಗಳೊಂದಿಗೆ, ಭವಿಷ್ಯದಲ್ಲಿ ವಾಯುಪಡೆಯನ್ನು ಸೇರಲಿರುವ ಕಾಂಬಾಟ್ ಏರ್’ಕ್ರಾಫ್ಟ್’ಗಳನ್ನೂ ಸಹ ಗೇಮ್’ನಲ್ಲಿ ಕಾಣಬಹುದಾಗಿದೆ. 

ಬಾಲಾಕೋಟ್ ವಾಯುದಾಳಿಯಲ್ಲಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪಾತ್ರವನ್ನೂ ಈ ಗೇಮ್;ನಲ್ಲಿ ಕಾಣಬಹುದು.