ಭಾರತದ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ಮುಂಬೈಯಿಂದ ಜಲ್ಗಾಂವ್‌ಗೆ ತನ್ನ ಚೊಚ್ಚಲ ಪ್ರಯಾಣ

ಮುಂಬೈ: ಭಾರತದ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್, ಮತ್ತೆ ಹೊಸದಾಗಿ ಕಾರ್ಯಾರಂಭಿಸಿದೆ.

ಮುಂಬೈಯಿಂದ ಜಲ್ಗಾಂವ್‌ಗೆ ತನ್ನ ಚೊಚ್ಚಲ ಪ್ರಯಾಣ ಆರಂಭಿಸುವ ಮೂಲಕ ಡೆಕ್ಕನ್ ಏರ್‌ಲೈನ್ ಮತ್ತೆ ವೈಮಾನಿಕ ಸೇವಾ ಕ್ಷೇತ್ರಕ್ಕೆ ಮರು ಪಾದಾರ್ಪಣೆ ಮಾಡಿದೆ.

ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಲ್ಗಾಂವ್‌ಗೆ ಡಿಎನ್ 1320 ವಿಮಾನ ಶನಿವಾರ ಮಧ್ಯಾಹ್ನ ಹಾರಾಟ ನಡೆಸಿತು.