ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಭರಾಟೆ| ಔರಂಗಾಬಾದ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅಸದುದ್ದೀನ್ ಒವೈಸಿ| ಭಾಷಣದ ಬಳಿಕ ವೇದಿಕೆ ಇಳಿದು ಬರುವಾಗ ಡ್ಯಾನ್ಸ್ ಮಾಡಿದ ಎಐಎಂಐಎಂ ಮುಖ್ಯಸ್ಥ| 2018ರಲ್ಲಿ ರಿಲೀಸ್ ಆದ ಮಿಯಾ ಭಾಯಿ ಹೈದರಾಬಾದಿ ಹಾಡಿಗೆ ಸ್ಟೆಪ್ ಹಾಕಿದ ಒವೈಸಿ| ಅಸದುದ್ದೀನ್ ಒವೈಸಿ ಡ್ಯಾನ್ಸ್ ಕಂಡು ದಂಗಾದ ನೆರೆದ ಜನಸ್ತೋಮ|

ಔರಂಗಾಬಾದ್(ಅ.19): ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದೆ. ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳೂ ಹರಸಾಹಸ ಮಾಡುತ್ತಿವೆ. ಇದಕ್ಕೆ ಸಂಸದ ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಹೊರತಾಗಿಲ್ಲ.

ಆದರೆ ಯಾವಾಗಲೂ ಗಂಟಲು ಹರಿಯುವಂತೆ ಜೋರಾಗಿ ಅರಚಿ ಭಾಷಣ ಮಾಡುವ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಗಾಂಭೀರ್ಯ ಪ್ರದರ್ಶಿಸುವ ಸಂಸದ ಅಸದುದ್ದೀನ್ ಒವೈಸಿ ಈ ಬಾರಿ ಅದೆಕೋ ಲೈಟ್ ಮೂಡ್'ನಲ್ಲಿರುವಂತೆ ಕಾಣುತ್ತದೆ.

ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ: ಮಹಾರಾಷ್ಟ್ರದಲ್ಲಿ ಒವೈಸಿ ಗುಡುಗು!

ಹೌದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಸದುದ್ದೀನ್ ಒವೈಸಿ, ಪ್ರಚಾರ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಜಬರ್'ದಸ್ತ್ ಡ್ಯಾನ್ಸ್ ಮಾಡಿದ್ದಾರೆ.

2018ರಲ್ಲಿ ರಿಲೀಸ್ ಆದ ಮಿಯಾ ಭಾಯಿ ಹೈದರಾಬಾದಿ ಎಂಬ ಹಾಡಿಗೆ ಯುವಕರ ಗುಂಪೊಂದು ಡ್ಯಾನ್ಸ್ ಮಾಡುತ್ತಿತ್ತು. ಈ ವೇಳೆ ವೇದಿಕೆ ಇಳಿಯುತ್ತಿದ್ದ ಓವೈಸಿ, ತಮ್ಮ ಹಾರವನ್ನು ಗಾಳಿಯಲ್ಲಿ ಹಾರಾಡಿಸುತ್ತಾ ತಾವೂ ಕೂಡ ಡ್ಯಾನ್ಸ್ ಮಾಡಿದರು.

Scroll to load tweet…

ಒವೈಸಿ ಅವರ ಡ್ಯಾನ್ಸ್ ನೋಡಿದ ಜನ ಕೆಲ ಕ್ಷಣ ಆಶ್ಚರ್ಯಗೊಂಡರಲ್ಲದೇ, ಅವರೊಂದಿಗೆ ತಾವೂ ಕೂಡ ಸ್ಟೆಪ್ ಹಾಕಿ ಉಲ್ಲಾಸಗೊಂಡರು. ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಮತ್ತು ಶಿವಸೇನೆಯನ್ನು ತರಾಟೆಗೆ ತೆಗೆದುಕೊಂಡ ಒವೈಸಿ, ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಹೊರಟಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಕಿಡಿಕಾರಿದರು.

ತಿವಾರಿ ಟು ಒವೈಸಿ: ಸಾವರ್ಕರ್ ‘ಭಾರತ’ ವಿರೋಧಿಸುವ ‘ರತ್ನ’ಗಳು!

ಇದಕ್ಕೂ ಮೊದಲು ಮಾತನಾಡುತ್ತಾ ಓಸ್ಮಾನಿಯಾ ಆಸ್ಪತ್ರೆಯಲ್ಲಿ ತಾವೊಮ್ಮೆ 15 ಬಾಟಲ್ ರಕ್ತದಾನ ಮಾಡಿದ್ದಾಗಿ ಒವೈಸಿ ಹೇಳಿದ್ದು, ವ್ಯಕ್ತಿಯೋರ್ವ ಒಂದೇ ಬಾರಿಗೆ 15 ಬಾಟಲ್ ರಕ್ತದಾನ ಮಾಡಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.