ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ತಮಗೆ ಮದುವೆಯ ಯೋಚನೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. 

ಹೈದ್ರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ತಮಗೆ ಮದುವೆಯ ಯೋಚನೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. 

ಇಲ್ಲಿ ಪತ್ರಕರ್ತರ ಜೊತೆ ಸಂವಾದದ ವೇಳೆ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ, ನನಗೆ ಈಗಾಗಲೇ ಕಾಂಗ್ರೆಸ್ ಜೊತೆ ಮದುವೆ ಯಾಗಿದೆ. 

ಸದ್ಯಕ್ಕೆ ನಮ್ಮ ಆದ್ಯತೆ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿದೆ ಎಂದಿದ್ದಾರೆ. 

ಈ ನಡುವೆ ಮೋದಿ ಅವರನ್ನು ಲೋಕ ಸಭೆಯಲ್ಲಿ ಅಪ್ಪಿಕೊಂಡ ಘಟನೆ ಬಗ್ಗೆ ಪ್ರಶ್ನಿಸಿದಾಗ, ನನಗದು ಬೆಚ್ಚಗಿನ ಅನುಭವಾಗಿತ್ತು, ಆದರೆ ಪ್ರಧಾನಿಗೆ ಅದು ಚಳಿ ತರಿಸಿತ್ತು ಎಂದಿದ್ದಾರೆ.