ಪಣಜಿ[ಜ.27]: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು 3 ದಿವಸಗಳ ಖಾಸಗಿ ಭೇಟಿಗೆಂದು ಗೋವಾಗೆ ಶನಿವಾರ ಸಂಜೆ ಆಗಮಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಹಾಗೂ ಅದರ ಹಿಂದಿನ ವರ್ಷ ಕೂಡ ಸೋನಿಯಾ ಅವರು ಮಗಳು ಪ್ರಿಯಾಂಕಾ ವಾದ್ರಾ ಹಾಗೂ ಅಳಿಯ ರಾಬರ್ಟ್‌ ವಾದ್ರಾ ಜತೆ ಗೋವಾಗೆ ಭೇಟಿ ನೀಡಿದ್ದರು. ಮೊಬೊರ್‌ ಬೀಚ್‌ನ ಖಾಸಗಿ ಪಂಚತಾರಾ ರೆಸಾರ್ಟ್‌ನಲ್ಲಿ ತಂಗಿದ್ದರು.

ರಾಹುಲ್ - ಪ್ರಿಯಾಂಕ ಜಂಟಿ ಸುದ್ದಿಗೋಷ್ಠಿ : ತಿಳಿಸ್ತಾರಾ ಮಹತ್ವದ ವಿಚಾರ..?

ವಿಶೇಷವೆಂದರೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಕೂಡ ಗೋವಾದಲ್ಲಿ ಡಿ.30ರವರೆಗೆ ಖಾಸಗಿ ಪ್ರವಾಸದಲ್ಲಿದ್ದಾರೆ.