ಪತ್ರಕರ್ತರನ್ನು ಬೀದಿ ನಾಯಿಗಳು ಎಂದು ಜರಿದಿದ್ದ ಎಐಎಡಿಎಂಕೆ ಪಕ್ಷದ ನಾಯಕನೋರ್ವನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಪಕ್ಷದ ಐಟಿ ಘಟಕದ ನಾಯಕರಾದ ಹರಿ ಪ್ರಭಾಕರನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ.

ಚೆನೈ(ಮೇ 28): ಪತ್ರಕರ್ತರನ್ನು ಬೀದಿ ನಾಯಿಗಳು ಎಂದು ಜರಿದಿದ್ದ ಎಐಎಡಿಎಂಕೆ ಪಕ್ಷದ ನಾಯಕನೋರ್ವನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಪಕ್ಷದ ಐಟಿ ಘಟಕದ ನಾಯಕರಾದ ಹರಿ ಪ್ರಭಾಕರನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ.

ತಮಿಳುನಾಡು ಡಿಸಿಎಂ ಓ. ಪನ್ನೀರಸೆಲ್ವಂ ಅವರು ಟುಟಿಕೊರಿನ್ ಗಲಭೆ ಸಂತ್ರಸ್ಥರನ್ನು ಭೇಟಿಯಾಗಲು ಬಂದಾಗ ಪತ್ರಕರ್ತರನ್ನು ಆಸ್ಪತ್ರೆ ಒಳಗೆ ಹೋಗಲು ಬಿಡಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಧ್ಯಮ ವರದಿಗಾರರು, ತಮ್ಮನ್ನು ಆಸ್ಪತ್ರೆ ಒಳಗಡೆ ಬಿಡಬೇಕೆಂದು ಪಟ್ಟು ಹಿಡಿದರು. ಈ ಘಟನೆಯನ್ನು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಹರಿ ಪ್ರಭಾಕರನ್, ಬೀದಿ ನಾಯಿಗೆ ಬಿಸ್ಕೆಟ್ ಹಾಕಿ ಅದನ್ನು ಹೊರಗೆ ಕಟ್ಟಿ ಹಾಕಬೇಕೇ ಹೊರತು ಅದನ್ನು ಯಾರೂ ಒಳಗಡೆ ಕರೆದುಕೊಂಡು ಹೋಗುವದಿಲ್ಲ ಎಂದು ಕೀಳು ಪದ ಪ್ರಯೋಗ ಮಾಡಿದ್ದರು.

Scroll to load tweet…

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹರಿ ಪ್ರಭಾಕರನ್ ತಮ್ಮ ಟ್ವಿಟ್ ಅಳಿಸಿ ಹಾಕಿದರಾದರೂ, ಪತ್ರಕರ್ತರ ಆಕ್ರೋಶ ಮನಗಂಡ ಎಐಎಡಿಎಂಕೆ ಪಕ್ಷದ ನಾಯಕರು ಪ್ರಭಾಕರನ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ನಿರ್ಣಯ ಕೈಗೊಂಡರು. ಬಳಿಕ ಪ್ರಭಾಕರನ್ ತಮ್ಮ ಈ ಮೊದಲಿನ ಟ್ವಿಟ್ ಅಳಿಸಿ ಹಾಕಿ, ತಾವು ಹೇಳಿದ್ದು ತಮ್ಮ ವ್ಯಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿ ಮತ್ತೊಂದು ಟ್ವಿಟ್ ಮಾಡಿದ್ದಾರೆ.