ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ತಮಿಳುನಾಡಿನ ‘ಅಮ್ಮ’ ಜಯಲಲಿತಾ ನಿಧನ ನಂತರ  ಸಿಎಂ ಪಟ್ಟಕ್ಕೇರಿದ ಪನ್ನೀರ್ ಸೆಲ್ವಂ ಇದೀಗ ಸಿಎಂ ಕುರ್ಚಿಯಿಂದ ಕೆಳಗಿಳಿಯುವುದು ಖಚಿತವಾಗಿದೆ. ಅಮ್ಮ ಬಿಟ್ಟು ಹೋದ ಕುರ್ಚಿಯಲ್ಲಿ, ಅವರ ಆಪ್ತೆ ಚಿನ್ನಮ್ಮನ ಪಟ್ಟಾಭಿಷೇಕ ನಡೆಯುವುದು ಖಚಿತವಾಗಿದೆ. ಇಂದು ನಡೆಯುವ ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಈ ಕುರಿತಾದ ಮಹತ್ವದ ನಿರ್ಧಾರ ಹೊರಬೀಳಲಿದೆ.

ಚೆನ್ನೈ(ಫೆ.05): ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ತಮಿಳುನಾಡಿನ ‘ಅಮ್ಮ’ ಜಯಲಲಿತಾ ನಿಧನ ನಂತರ ಸಿಎಂ ಪಟ್ಟಕ್ಕೇರಿದ ಪನ್ನೀರ್ ಸೆಲ್ವಂ ಇದೀಗ ಸಿಎಂ ಕುರ್ಚಿಯಿಂದ ಕೆಳಗಿಳಿಯುವುದು ಖಚಿತವಾಗಿದೆ. ಅಮ್ಮ ಬಿಟ್ಟು ಹೋದ ಕುರ್ಚಿಯಲ್ಲಿ, ಅವರ ಆಪ್ತೆ ಚಿನ್ನಮ್ಮನ ಪಟ್ಟಾಭಿಷೇಕ ನಡೆಯುವುದು ಖಚಿತವಾಗಿದೆ. ಇಂದು ನಡೆಯುವ ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಈ ಕುರಿತಾದ ಮಹತ್ವದ ನಿರ್ಧಾರ ಹೊರಬೀಳಲಿದೆ.

ಚಿನ್ಮ ಮ್ಮನ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ : ಫೆಬ್ರವರಿ 8 - 9 ರಂದು ಪ್ರಮಾಣ ವಚನ ಸ್ವೀಕಾರ?

ಅಂದಹಾಗೆ ಶಶಿಕಲಾ ನಟರಾಜನ್ ಸಿಎಂ ಆಗುವ ಆಯ್ಕೆ ನಡೆದಿದ್ದು ಜಯಲಲಿತಾ ಸಮಾಧಿ ಸಮ್ಮುಖದಲ್ಲಿಯೇ. ಈಗಾಗಲೇ ಅಣ್ಣಾಡಿಎಂಕೆಯಿಂದ ಪನ್ನೀರ್ ಸೆಲ್ವಂಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಜಯಲಲಿತಾ ಆಪ್ತರಾಗಿದ್ದ ಶೀಲಾ ಬಾಲಕೃಷ್ಣನ್, ವೆಂಕಟರಾಮನ್ ಅವರಿಗೂ ರಾಜೀನಾಮೆ ನೀಡಲು ಸೂಚನೆ ಕೊಡಲಾಗಿದೆ. ಎಲ್ಲರೂ ರಾಜೀನಾಮೆ ನೀಡಿದ ನಂತರ, ಚಿನ್ನಮ್ಮನಿಗೆ ಪಟ್ಟಾಭಿಷೇಕ ನಡೆಯಲಿದೆ. ಸದ್ಯ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ನಟರಾಜನ್, ಫೆಬ್ರವರಿ 8 ಅಥವಾ 9 ರಂದು ಸಿಎಂ ಆಗುವುದು ಖಾತ್ರಿಯಾಗಿದೆ.

ಜೆ.ಜಯಲಲಿತಾ ಅವರ ಆಪ್ತ ಸ್ನೇಹತೆ ಶಶಿಕಲಾ ನಟರಾಜನ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಲು ಎಐಎಡಿಎಂಕೆ ಶಾಸಕರು ಕೂಡ ಉತ್ಸುಕರಾಗಿದ್ದಾರೆ. ಅಂದು ವಿರೋಧಿಸುತ್ತಿದ್ದವರೇ ಇಂದು ಶಶಿಕಲಾ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೆಲ್ಲಾ ನೋಡಿದರೆ ಶಶಿಕಲಾ ರಾಜಕೀಯ ಚದುರಂಗದಾಟ ಎಷ್ಟರ ಮಟ್ಟಿಗಿದೆ ಅಂತಾ ಗೊತ್ತಾಗುತ್ತದೆ.

ಒಟ್ಟಿನಲ್ಲಿ ಜಯಲಲಿತಾ ನಿಧನದ ಬಳಿಕ ತೆರವಾಗಿದ್ದ ಹುದ್ದೆಗೆ ರಾತೋರಾತ್ರಿ ಪನ್ನೀರ್ ಸೆಲ್ವಂರನ್ನು ಆಯ್ಕೆ ಮಾಡಲಾಗಿತ್ತು. ಅವರ ಆಯ್ಕೆಯಲ್ಲಿ ಶಶಿಕಲಾ ನಟರಾಜನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಮಾತೂ ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿ ಇದೀಗ ಶಶಿಕಲಾ ನಟರಾಜನ್ ಸಿಎಂ ಆಗುತ್ತಿದ್ದಾರೆ. ಮೂರು ಬಾರಿ ಸಿಎಂ ಆಗಿದ್ದ ಪನ್ನೀರ್ ಸೆಲ್ವಂ ಇದೀಗ ಚಿನ್ನಮ್ಮನ ಗೇಮ್ ಪ್ಲಾನ್‌'ನಿಂದ ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ.