ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆಯ ನಿರ್ಲಕ್ಷಿತ ನಾಯಕಿ ವಿ.ಕೆ.ಶಶಿಕಲಾ ಅವರು ಜಯಲಲಿತಾ ಪುಣ್ಯತಿಥಿಯ ಅಂಗವಾಗಿ ‘ಮೌನವ್ರತ’ ಮಾಡುತ್ತಿದ್ದಾರೆ ಎಂದು ಎಐಎಡಿಎಂಕೆಯ ಪದಚ್ಯುತ ಮುಖಂಡ ಟಿ.ಟಿ.ವಿ.ದಿನಕರನ್ ಹೇಳಿದ್ದಾರೆ.
ಬೆಂಗಳೂರು (ಡಿ.29): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆಯ ನಿರ್ಲಕ್ಷಿತ ನಾಯಕಿ ವಿ.ಕೆ.ಶಶಿಕಲಾ ಅವರು ಜಯಲಲಿತಾ ಪುಣ್ಯತಿಥಿಯ ಅಂಗವಾಗಿ ‘ಮೌನವ್ರತ’ ಮಾಡುತ್ತಿದ್ದಾರೆ ಎಂದು ಎಐಎಡಿಎಂಕೆಯ ಪದಚ್ಯುತ ಮುಖಂಡ ಟಿ.ಟಿ.ವಿ.ದಿನಕರನ್ ಹೇಳಿದ್ದಾರೆ.
ಆರ್.ಕೆ.ನಗರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ, ಇದೇ ಮೊದಲ ಬಾರಿಗೆ ಶಶಿಕಲಾರನ್ನು ಗುರುವಾರ ಭೇಟಿ ಮಾಡಿದ ಬಳಿಕ ಮಾತ ನಾಡಿದ ದಿನಕರನ್, ‘ಅಮ್ಮ(ಜಯಾ) ಅವರ ಮೊದಲ ಪುಣ್ಯತಿಥಿಯಾದ ಡಿ.೫ರಿಂದ ಶಶಿಕಲಾ ಅವರು ಮೌನವ್ರತ ದಲ್ಲಿದ್ದಾರೆ. ಹಾಗಾಗಿ, ಪಕ್ಷದ ಮುಂದಿನ ಕಾರ್ಯಕ್ರಮಗಳ ಕುರಿತು ನಾನು ವಿವರಿಸಿದ ಎಲ್ಲವನ್ನು ಅವರು ಆಲಿಸಿದರು,’ ಎಂದು ಹೇಳಿದ್ದಾರೆ. ೪೪ ಟಿಟಿವಿ ಬೆಂಬಲಿಗರಿಗೆ ಎಐಡಿಎಂಕೆ ಗೇಟ್‌ಪಾಸ್: ಆರ್.ಕೆ.ನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂ ಡ ಬಳಿಕ ಪಕ್ಷದಲ್ಲಿರುವ ಟಿ.ಟಿ.ವಿ.ದಿನಕರನ್ ಬೆಂಬಲಿಗ ರನ್ನು ಪತ್ತೆ ಹಚ್ಚಿ ಉಚ್ಚಾಟಿಸುವ ಕೆಲಸವನ್ನು ಎಐಎಡಿಎಂಕೆ ತೀವ್ರಗೊಳಿಸಿದೆ. ಅದರ ಪ್ರಕಾರ ಗುರುವಾರ ಮತ್ತೆ ಟಿಟಿವಿಯ 44 ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟಿಸ ಲಾಗಿದೆ ಎಂದು ಎಐಎಡಿಎಂಕೆಯ ಒಪಿಎಸ್ ಮತ್ತು ಕೆ.ಪಳನಿಸ್ವಾಮಿ ಜಂಟಿ ಘೋಷಣೆ ಮಾಡಿದ್ದಾರೆ.
