ಚೆನ್ನೈ : AIADMK  ಮುಖಂಡ ಹೃದಯಾಘಾತದಿಂದ  ನಿಧನರಾಗಿದ್ದಾರೆ. 

ಸೂಲೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಆರ್ ಕನಗರಾಜ್ ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. 

ಗುರುವಾರ ಮುಂಜಾನೆ ಸುದ್ದಿಪತ್ರಿಕೆ ಓದುತ್ತಿದ್ದ ವೇಳೆ 67 ವರ್ಷದ  ಕನಗರಾಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಕನಗರಾಜ್ ನಿಧನಕ್ಕೆ ಪಕ್ಷದ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ. ಮೂಲತಃ ಕೃಷಿಕರಾಗಿದ್ದ ಅವರ ನಿಧನ ಪಕ್ಷಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ. 

ಏಪ್ರಿಲ್ 18 ರಂದು ತಮಿಳುನಾಡಿನ 18 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದ ಚುನಾವಣೆಯೂ ನಡೆಯುತ್ತಿದೆ.