ಅಹಮದಾಬಾದ್`ನ ಆಶ್ರಮಮ್ ರಸ್ತೆಯಲ್ಲಿರುವ ಸಹಕಾರಿ ಬ್ಯಾಂಕ್`ನಲ್ಲಿ ಡೆಪಾಸಿಟ್ ಆಗಿದ್ದು, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿವೆ.
ಅಹಮದಾಬಾದ್(ಡಿ.23): ನವೆಂಬರ್ 8ರ ರಾತ್ರಿ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದ ಬಳಿಕ ಮೂರು ದಿನಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಸಹಕಾರಿ ಬ್ಯಾಂಕ್`ವೊಂದಕ್ಕೆ 500 ಕೋಟಿ ರೂಪಾಯಿ ಡೆಪಾಸಿಟ್ ಆಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಕೂತೂಹಲದ ವಿಷವೆಂದರೆ 500 ಕೋಟಿಯಲ್ಲಿ ಬಹುತೇಕ ಹಣ ನವೆಂಬರ್ 8ರ ರಾತ್ರಿಯೇ ಜಮೆಯಾಗಿದೆ.
ಅಹಮದಾಬಾದ್`ನ ಆಶ್ರಮಮ್ ರಸ್ತೆಯಲ್ಲಿರುವ ಸಹಕಾರಿ ಬ್ಯಾಂಕ್`ನಲ್ಲಿ ಡೆಪಾಸಿಟ್ ಆಗಿದ್ದು, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿವೆ.
ಈ ಸಹಕಾರಿ ಬ್ಯಾಂಕ್`ಗೆ 190 ಶಾಕೆಗಳಿದ್ದು, ಕೇಂದ್ರ ಕಚೇರಿಯಲ್ಲಿ ಇಷ್ಟೊಂದು ಪ್ರಮಾಣದ ಹಣ ಜಮೆಯಾಗಿದೆ. ಸಣ್ಣ ವ್ಯಾಪಾರಿಗಳು ಮತ್ತು ರೈತರು ಈ ಬ್ಯಾಂಕಿನ ಪ್ರಮುಖ ಗ್ರಾಹಕರಾಗಿದ್ದು, ಇಷ್ಟು ಪ್ರಮಾಣದ ಹಣ ಜಮೆಯಾಗಿರುವುದು ಭಾರೀ ಗುಮಾನಿ ಹುಟ್ಟಿಸಿದೆ.