ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ವಾಯುಸೇನೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ನ್ಯಾಯಾಂಗ ಬಂಧನವನ್ನು ಡಿ. 30 ವರೆಗೆ ವಿಸ್ತರಿಸಲಾಗಿದೆ.

ನವದೆಹಲಿ (ಡಿ.17): ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ವಾಯುಸೇನೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ನ್ಯಾಯಾಂಗ ಬಂಧನವನ್ನು ಡಿ. 30 ವರೆಗೆ ವಿಸ್ತರಿಸಲಾಗಿದೆ.

ತ್ಯಾಗಿ ಸೇರಿದಂತೆ ಇನ್ನಿತರ ಆರೋಪಿಗಳ ಸಿಬಿಐ ಬಂಧನ ಇಂದು ಮುಕ್ತಾಯವಾಗಿದ್ದು, ಇವರನ್ನು ಇವತ್ತು ಪಟಿಯಾಲಾ ಹೌಸ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.

ತ್ಯಾಗಿ ಹಾಗೂ ಇತರ ಆರೋಪಿಗಳ ಬಂಧನ ಅವಧಿಯನ್ನು 10 ದಿನಗಳಿಗೆ ವಿಸ್ತರಿಸಿ ಎಂದು ಸಿಬಿಐ, ನ್ಯಾಯಾಲಯಕ್ಕೆ ಕೋರಿತ್ತು. ಮುಂದಿನ ವಿಚಾರಣೆ ಡಿ. 21 ರಂದು ನಡೆಯಲಿದೆ.