Asianet Suvarna News Asianet Suvarna News

ಇನ್ನು ಕೆಲ ವರ್ಷಗಳಲ್ಲಿ ಕೃಷಿ ಬೆಳೆಗಳ ಬೆಲೆ ದುಪ್ಪಟ್ಟು

2022ರ ವೇಳೆಗೆ ಕೃಷಿ ಬೆಳೆಗಳ ಉತ್ಪಾದನೆ ಮತ್ತು ಬೆಲೆ ದುಪ್ಪಟ್ಟಾಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದು, 21ನೇ ಶತಮಾನದಲ್ಲಿ ಕೃಷಿ ಕ್ಷೇತ್ರದಲ್ಲಿ ಉನ್ನತವಾದ ಆಶಯಗಳೊಂದಿಗೆ ದೇಶ ಪ್ರಗತಿಯತ್ತ ಸಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದರು.

Agriculture Product Price Hike

ಬೆಳಗಾವಿ: 2022ರ ವೇಳೆಗೆ ಕೃಷಿ ಬೆಳೆಗಳ ಉತ್ಪಾದನೆ ಮತ್ತು ಬೆಲೆ ದುಪ್ಪಟ್ಟಾಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದು, 21ನೇ ಶತಮಾನದಲ್ಲಿ ಕೃಷಿ ಕ್ಷೇತ್ರದಲ್ಲಿ ಉನ್ನತವಾದ ಆಶಯಗಳೊಂದಿಗೆ ದೇಶ ಪ್ರಗತಿಯತ್ತ ಸಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದರು.

ಇಲ್ಲಿಯ ಕೆಎಲ್‌ಇ ಜೀರಿಗೆ ಸಭಾಭವನದಲ್ಲಿ ಭಾರತೀಯ ಕೃಷಿಕ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪರಿಷದ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಕಾರ್ಯದಿಂದ ಜನ ಹತಾಶರಾದರೆ ಅದರಿಂದ ದೇಶಕ್ಕೆ ಭವಿಷ್ಯವಿಲ್ಲ.

ಈ ನಿಟ್ಟಿನಲ್ಲಿ ಕೃಷಿಯಲ್ಲಿ ಭವಿಷ್ಯ ನಿರ್ಮಾಣದ ದೃಷ್ಟಿಯಿಂದ ದೂರದೃಷ್ಟಿಯ ವಿಚಾರಗಳೊಂದಿಗೆ ಬದಲಾವಣೆಯತ್ತ ಸಾಗಬೇಕಿದೆ ಎಂದರು. ನಾನು ಇಂದಿಗೂ ಹಳ್ಳಿಯಲ್ಲೇ ನೆಲೆಸಿದ್ದೇನೆ. ನನ್ನ ತಂದೆ, ನಾನು ಕೃಷಿಯನ್ನೇ ಅವಲಂಬಿಸಿದ್ದು ನಾವೂ ರೈತರೇ ಆಗಿದ್ದೇವೆ. ನಮಗೂ ಕೃಷಿ ಸಮಸ್ಯೆಗಳ ಅರಿವಿದೆ.

ನಮ್ಮ ದೇಶದ ಶೇ.55ರಷ್ಟು ಜನರು ಇಂದಿಗೂ ಕೃಷಿಯನ್ನೇ ಅವಲಂಭಿಸಿದ್ದಾರೆ. ಲಾಭವಿಲ್ಲದಿದ್ದರೂ ಅದರಲ್ಲಿ ನಿರೀಕ್ಷೆ ಇಟ್ಟುಕೊಂಡು ಕೃಷಿ ನಡೆಸುತ್ತಿರುವ ಅವರನ್ನು ಬಹಾದ್ದೂರ್ ಎನ್ನಲೇಬೇಕೆಂದರು.

Follow Us:
Download App:
  • android
  • ios