ಬೆಂಗಳೂರು (ಫೆ.12): ನೆನ್ನೆಯಷ್ಟೆ ಅಗ್ನಿ ಶ್ರೀಧರ್ ಮಾಧ್ಯಮದ ವಿರುದ್ಧ ಸಿಡಿದೆದ್ದಿದ್ದರು. ಇಂದು ಅವರೇ ಸುದ್ಧಿಗೊಷ್ಟಿ ನಡೆಸಿ ಅಸ್ಪತ್ರೆ ಸೇರೋಕೆ ಮುಂಚೆ ನಡೆದ ಸತ್ಯದ ಬಗ್ಗೆ ವಿವರವಾಗಿ ಹೇಳಿದರು. ನಿಜಕ್ಕೂ ತನಿಖೆ ವೇಳೆ ನಡೆದಿದ್ದೇನು ಅದರ ಡೀಟೇಲ್ಸ್​ ಇಲ್ಲಿದೆ.

ಸತತ ಮುಕ್ಕಾಲು ಗಂಟೆ ಮಾತನಾಡಿದ ಅಗ್ನಿ ಶ್ರೀಧರ್ ಅಂದು ಶೂಟೌಟ್​ ಪ್ರಕರಣದ ಶಂಕಿತ ಆರೋಪಿ ರೋಹಿತ್ ತನ್ನ ಮನೆಗೆ ಬಂದಿರೋದು ನಿಜ ಆದರೆ ಶೂಟೌಟ್​ ಬಗ್ಗೆ ನನಗೇನು ಮಾಹಿತಿ ಇಲ್ಲ. ಟಿವಿ ನೋಡಿದಾಗಲೇ ನನಗೂ ಗೊತ್ತಾಗಿದ್ದು ಎಂದರು. ಇನ್ನು ಸರ್ಚ್​ ವಾರೆಂಟ್​ ತೆಗೆದುಕೊಂಡು ಬಂದಿದ್ದ ಪೊಲೀಸ್​ ಅಧಿಕಾರಿಗಳು​ ಶ್ರೀಧರ್​ ಗನ್​ ಮ್ಯಾನ್​ಗೆ ಥಳಿಸಿದ್ದರಂತೆ . ಇದರಿಂದ ಅಗ್ನಿ ಕೋಪಗೊಂಡಿದ್ದಕ್ಕೆ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ . ಇನ್ನು ಮನೆಯಲ್ಲಿ ಸಿಕ್ಕಿದ್ದ ಗಾಂಜಾ ತನ್ನ ಸೇವನೆಗೆಂದು ಒಪ್ಪಿಕೊಂಡಿರುವ ಅಗ್ನಿ, ಅದಕ್ಕೆ ಸೈದ್ಧಾಂತಿಕ ವಿವರಣೆ ಕೂಡ ನೀಡಿದರು. ಇನ್ನು ಸುನೀಲ ಮತ್ತು ರೋಹಿತ್​ನನ್ನ ಪೊಲೀಸರು ಹೇಳಿದ ತಕ್ಷಣ ಸರಂಡರ್​ ಮಾಡಿಸಿದ್ದೂ ನಾನೆ ಎಂದು ಒಪ್ಪಿಕೊಂಡಿರುವ ಅಗ್ನಿ , ನಾನೀ ಪ್ರಕರಣದ ಆರೋಪಿಯಲ್ಲ ಎಂದು ಸಾರಿ ಸಾರಿ ಹೇಳಿದರು.

ಸದ್ಯಕ್ಕೆ ಮಧ್ಯಂತರ ಜಾಮೀನು ಪಡೆದಿರುವ ಅಗ್ನಿ ಶ್ರೀಧರ್​ ಈ ಪ್ರಕರಣದಲ್ಲಿ ನಾನು ತಪ್ಪಿತಸ್ಥನೇ ಆಗಿದ್ರೆ ನನ್ನನ್ನ ಬಂಧಿಸಿ ಮತ್ತು ಆರೊಪಿ ನನ್ನ ತಮ್ಮನೇ ಆಗಿದ್ರೂ ಆತನನ್ನ ಶೂಟ್​ ಮಾಡಿ ಎಂದು ಓಪನ್​ ಚಾಲೆಂಜ್​ ಹಾಕಿದ್ರು. ಸದ್ಯಕ್ಕೆ ಅಗ್ನಿ ಶ್ರೀಧರ್​ ಅವರ ಮುಂದಿನ ನಡೆ ಎನು ಎಂದು ಕಾದು ನೊಡಬೇಕಿದೆ.