ಇಸ್ಲಮಾಬಾದ್(ಸೆ.14): ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತೆ ಭಾರತವನ್ನು ಕೆಣಕಿದ್ದಾರೆ. ಕಾಶ್ಮೀರ ಹೋರಾಟದಲ್ಲಿ ಬಲಿದಾನ ಮಾಡಿದವರಿಗಾಗಿ ಈದ್ ಉಲ್ ಆಝಾವನ್ನು ಸಮರ್ಪಿಸುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಈದ್ ಸಂದರ್ಭದಲ್ಲಿ ಪಾಕಿಸ್ತಾನ್ ಮುಸ್ಲಿಂರಿಗೆ ನವಾಜ್ ಈ ಸಂದೇಶ ನೀಡಿದ್ದಾರೆ. ಕಾಶ್ಮೀರಿಗಳ ತ್ಯಾಗ ಮತ್ತು ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ. ಇದೇ ವೇಳೆ ಸೇನಾಪಡೆಗಳ ಮೂಲಕ ಕಾಶ್ಮೀರಿಗರ ಧ್ವನಿಯನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ಭಾರತದ ವಿರುದ್ಧ ಗುಡುಗಿದ್ದಾರೆ.
ಭಾರತದಿಂದ ಸ್ವಾತಂತ್ರ್ಯಗಳಿಸಲು ಕಾಶ್ಮೀರದ ಜನತೆ ಮೂರನೇ ತಲೆಮಾರಿಗೂ ಹೋರಾಟವನ್ನು ತ್ಯಾಗ ಮಾಡಿದ್ದಾರೆ ಎಂದು ಷರೀಫ್ ಹೇಳಿದ್ದಾರೆ.
