ರಾಜ್ಯ ಬಿಜೆಪಿಯ ಪದಾಧಿಕಾರಿಗಳ ನೇಮಕ ನ್ಯಾಯಸಮ್ಮತವಾಗಿ ಆಗಿಲ್ಲ ಎಂಬ ಅಸಮಾಧಾನ ಮುಂದಿಟ್ಟುಕೊಂಡು ಬಿಜೆಪಿಯ ಎರಡನೇ ಸಾಲಿನ ನಾಯಕರು ಎರಡನೇ ಸುತ್ತಿನ ಭಿನ್ನಮತ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಅತೃಪ್ತ ನಾಯಕರು ಪಕ್ಷದ ಪದ್ದತಿಯ ಪ್ರಕಾರ ಕಾರ್ಯ ನಿರ್ವಹಿಸದಿದ್ದರೆ ನಾವು ಭಿನ್ನಮತೀಯರು ಅಂತ ತೊಡೆತಟ್ಟಿದ್ದಾರೆ.
ಬೆಂಗಳೂರು(ಮಾ.07): ರಾಜ್ಯ ಬಿಜೆಪಿಯ ಪದಾಧಿಕಾರಿಗಳ ನೇಮಕ ನ್ಯಾಯಸಮ್ಮತವಾಗಿ ಆಗಿಲ್ಲ ಎಂಬ ಅಸಮಾಧಾನ ಮುಂದಿಟ್ಟುಕೊಂಡು ಬಿಜೆಪಿಯ ಎರಡನೇ ಸಾಲಿನ ನಾಯಕರು ಎರಡನೇ ಸುತ್ತಿನ ಭಿನ್ನಮತ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಅತೃಪ್ತ ನಾಯಕರು ಪಕ್ಷದ ಪದ್ದತಿಯ ಪ್ರಕಾರ ಕಾರ್ಯ ನಿರ್ವಹಿಸದಿದ್ದರೆ ನಾವು ಭಿನ್ನಮತೀಯರು ಅಂತ ತೊಡೆತಟ್ಟಿದ್ದಾರೆ.
ಇದು ಬಿಜೆಪಿಯ ಭಿನ್ನಮತೀಯ ನಾಯಕರು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತೊಡೆ ತಟ್ಟಿದ ಪರಿ. ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ, ಯಾವುದೇ ಒಡಕಿಲ್ಲ ಅಂತ ಸಂದೇಶ ರವಾನಿಸುವ ಯತ್ನದಲ್ಲಿ ಯಡಿಯೂರಪ್ಪ ಇರುವಾಗಲೇ, ಬಿಜೆಪಿಯ ಅತೃಪ್ತರ ಬಣ ಬಂಡಾಯದ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಶಾಸಕರ ಭವನದ ನಡೆದ ಸುದ್ದಿಗೋಷ್ಠಿ ನಡೆಸಿ, ಅಮಿತ್ ಶಾ ಸೂಚನೆಯ ನಂತರವೂ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಾದ ತಪ್ಪುಗಳ ಸರಿಪಡಿಸಿಲ್ಲ ಅಂತ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಸ್'ವೈಗೆಸೆಡ್ಡು!
ಈ ಹಿಂದೆ ಸೊಗಡು ಶಿವಣ್ಣ ಸೇರಿದಂತೆ ಪಕ್ಷದ ಕೆಲ ನಾಯಕರ ಮೇಲೆ ಕೈಗೊಳ್ಳಲಾಗಿದ್ದ ಶಿಸ್ತುಕ್ರಮದ ಹಿಂತೆಗೆಯದ ಬಗ್ಗೆ ಈ ಭಿನ್ನಮತೀಯ ನಾಯಕರಿಗೆ ತೀವ್ರ ಅಸಮಾಧಾನವಿದೆ. ಜೊತೆಗೆ ಕೇವಲ ಅಸಮಾಧಾನಗೊಂಡವರ ಕರೆದು ಸಭೆ ನಡೆಸದೇ, ಎಲ್ಲ ನಾಯಕರ ಒಟ್ಟಿಗೇ ಸಭೆ ಕರೆದಿರುವುದೇ ಇದಕ್ಕೆಲ್ಲ ಕಾರಣ. ಅಷ್ಟೇ ಅಲ್ಲ, ಸ್ವತಃ ತಾವೇ ರಾಜ್ಯ ಪ್ರವಾಸ ಮಾಡಿ ಇದೇ 15ರಂದು ವರದಿ ಜನರ ಮುಂದಿಡಲು ಸಿದ್ಧರಾಗಿದ್ದಾರೆ.
ಇತ್ತ ಯಡಿಯೂರಪ್ಪ ಜಿಲ್ಲಾವಾರು ಪಕ್ಷದ ಎಲ್ಲ ನಾಯಕರ ಕರೆದು ಸಭೆ ನಡೆಸುತ್ತಿದ್ದಾರೆ. ಈ ಹಂತದಲ್ಲೇ ಮತ್ತೊಮ್ಮೆ ಸ್ಪೋಟಗೊಂಡ ಅಸಮಾಧಾನ ಆಗಿರುವ ತಪ್ಪು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದೊಮ್ಮೆ ಭಾರೀ ಬಂಡಾಯದ ಮುನ್ಸೂಚನೆ ನೀಡಿದೆ.
ವೀರೇಂದ್ರಉಪ್ಪುಂದ, ಸುವರ್ಣನ್ಯೂಸ್.
