ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಪುತ್ರನಿಗೆ ಬೋರ್ಡ್ ಪರೀಕ್ಷೆಯಲ್ಲಿ ರ‍್ಯಾಂಕ್

Afzal Gurus son secures Distinction in JK class 12 board exam
Highlights

ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಪುತ್ರ ಗಾಲಿಬ್ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ  ಶೇ.95ರಷ್ಟು ಅಂಕಗಳನ್ನು ಪಡೆದುಕೊಂಡು ಸುದ್ದಿಯಾಗಿದ್ದಾನೆ.

ಜಮ್ಮು ಕಾಶ್ಮೀರ (ಜ.11): ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಪುತ್ರ ಗಾಲಿಬ್ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ  ಶೇ.95ರಷ್ಟು ಅಂಕಗಳನ್ನು ಪಡೆದುಕೊಂಡು ಸುದ್ದಿಯಾಗಿದ್ದಾನೆ.

ಜಮ್ಮು ಕಾಶ್ಮೀರ ರಾಜ್ಯ ಎಕ್ಸಾಂ ಬೋರ್ಡ್ ಪ್ರಕಟಿಸಿದ ಫಲಿತಾಂಶದಲ್ಲಿ 500ಕ್ಕೆ 441 ಅಂಕಗಳನ್ನು ಪಡೆದುಕೊಂಡಿದ್ದಾನೆ.

ಅಲ್ಲದೇ ಈತ ವೈದ್ಯಕೀಯ ಔಷಧೀಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾಗಿ ಹೇಳಿದ್ದಾನೆ. ಈ ಮೂಲಕ ವೈದ್ಯನಾಗಬೇಕೆನ್ನುವುದು ತನ್ನ ಆಸೆಯಾಗಿದೆ ಎಂದು ಗಾಲಿಬ್ ಅಫ್ಜಲ್ ಗುರು ಹೇಳಿದ್ದಾನೆ.

ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿನ ಪುತ್ರ ಮಾಡಿದ  ಈ ಸಾಧನೆ ಈಗ ಭಾರಿ ಸುದ್ದಿಯಾಗಿದೆ.

loader