ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಕ್ಕೆ ತೆರಳಲು ಯತ್ನಿಸಿ ವಿವಾದ ಸೃಷ್ಟಿಸಿದ್ದ ಸಾಮಾಜಿಕ ಕಾರ್ಯ ಕರ್ತೆ ಹಾಗೂ ಬಿಎಸ್ ಎನ್‌ಎಲ್ ಉದ್ಯೋಗಿ ರೆಹಾನಾ ಫಾತಿಮಾ ರನ್ನು ಬೇರೆ ಶಾಖೆಗೆ  ವರ್ಗಾವಣೆ ಮಾಡಲಾಗಿದೆ. 

ಫಾತಿಮಾರನ್ನು ಎರ್ನಾಕುಲಂನ ರವಿಪುರಂ ಶಾಖೆಯಿಂದ ಬೋಟ್ ಜೆಟ್ಟಿ ಶಾಖೆಗೆ ವರ್ಗಾಯಿಸಲಾ ಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾತಿಮಾ, ಇದು ಅಯ್ಯಪ್ಪನ ಪ್ರಸಾದ. 5 ವರ್ಷಗಳ ಹಿಂದೆಯೇ ವರ್ಗ ಕೇಳಿದ್ದೆ. 

ಈವರೆಗೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಅಯ್ಯಪ್ಪನ ದರ್ಶನಕ್ಕೆ ತೆರಳುವ ಯತ್ನ ಮಾಡುತ್ತಲೇ ಅದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.